ಶಿರ್ವ: ಅಪರಿಚಿತರಿಬ್ಬರು ಗ್ರಾಹಕರ ಸೋಗಿನಲ್ಲಿ ಶಿರ್ವ ಪೇಟೆಯಲ್ಲಿನ ಕೃಪಾ ಜುವೆಲರ್ಸ್ ಗೆ ಬಂದು 1.49 ಲ.ರೂ. ಮೌಲ್ಯದ ನೆಕ್ಲೇಸ್ ಕಳವು ಮಾಡಿ ಪರಾರಿಯಾಗಿದ್ದಾರೆ.
ಶಿರ್ವ ಕುತ್ಯಾರು ರಸ್ತೆ ಬಳಿಯಿರುವ ಕೃಪಾ ಜುವೆಲರ್ನಲ್ಲಿ ಜೂ. 9ರಂದು 1.49 ಲ.ರೂ ಮೌಲ್ಯದ 28.79 ಗ್ರಾಂ. ಚಿನ್ನದ ನೆಕ್ಲೇಸ್ ಕಾಣೆಯಾಗಿತ್ತು. ಮಾಲಕರು ಅಂಗಡಿಯ ಸಿಸಿ ಕೆಮರಾ ಪರಿಶೀಲಿಸಿದಾಗ ಜೂ. 6ರಂದು ಮಧ್ಯಾಹ್ನ ಜುವೆಲರಿಗೆ ಗ್ರಾಹಕರ ಸೋಗಿನಲ್ಲಿ ಬಂದ ಅಪರಿಚಿತರು ಕೆಲಸದವರಿಗೆ ತಿಳಿಯದಂತೆ ಚಿನ್ನದ ನೆಕ್ಲೇಸ್ ನ್ನು ಕಳ್ಳತನ ಮಾಡುವ ಕೃತ್ಯ ಸೆರೆಯಾಗಿದೆ.ಈ ಸಂಬಂಧ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
11/06/2022 12:29 pm