ಕುಂದಾಪುರ: ಉಪ್ಪಿನಕುದ್ರುವಿನ ಶಿಲ್ಪಾ ದೇವಾಡಿಗ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟು ಪೊಲೀಸರು ಅಝೀಝ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ಮೇ 23ರಂದು ಶಿಲ್ಪ ದೇವಾಡಿಗ ಎಂಬ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಕೆಯ ಸಾವಿನ ಬಳಿಕ ಹಿಂದೂ ಸಂಘಟನೆಗಳು ಮತಾಂತರ ಒತ್ತಾಯ ಮತ್ತು ಲವ್ ಜಿಹಾದ್ ಆರೋಪ ಮಾಡಿದ್ದರು.
ಮದುವೆಯಾಗಿದ್ದರೂ ಶಿಲ್ಪಾ ದೇವಾಡಿಗ ಜೊತೆ ಅಝೀಜ್ ಅಕ್ರಮ ಸಂಬಂಧ ಹೊಂದಿದ್ದ. ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ಎಂಬ ಆರೋಪ ಕೇಳಿ ಬಂದಿತ್ತು.ಇದೀಗ ಪೊಲೀಸರು ಅಝೀಝ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
PublicNext
30/05/2022 01:17 pm