ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕಟಪಾಡಿಯ ರಿಯಲ್ ಎಸ್ಟೇಟ್‌ ಉದ್ಯಮಿ ನಾಪತ್ತೆ!

ಕಟಪಾಡಿ: ಇಲ್ಲಿನ ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರು ನಾಪತ್ತೆಯಾಗಿದ್ದಾರೆ. ಕಟಪಾಡಿ ನಿವಾಸಿ ಪ್ರಕಾಶ್‌ ರಾವ್‌ (46) ನಾಪತ್ತೆಯಾದವರು.

ಇವರು ಮೇ 9 ರಂದು ಕಟಪಾಡಿಯ ತಮ್ಮ ಮನೆಯಿಂದ ಹೊರಟು ಬಾರ್ಕೂರು ಗರಿಕೆ ಮಠ ದೇವಸ್ಥಾನಕ್ಕೆಂದು ಹೋಗಿದ್ದರು. ಆದರೆ ಅವರು ವಾಪಾಸು ಮನೆಗೆ ಬಾರದೆ ಕಾಣೆಯಾಗಿದ್ದು, ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕಾಶ್‌ ಅವರಿಗೆ ಇಬ್ಬರು ಮಕ್ಕಳಿದ್ದಾರೆ.

ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾಪು ಪೊಲೀಸ್‌ ಠಾಣೆ 0820-2551033 ದೂರವಾಣಿಯನ್ನು ಸಂಪರ್ಕಿಸುವಂತೆ ವಿನಂತಿಸಿದ್ದಾರೆ.

Edited By :
Kshetra Samachara

Kshetra Samachara

17/05/2022 08:23 am

Cinque Terre

8.53 K

Cinque Terre

0

ಸಂಬಂಧಿತ ಸುದ್ದಿ