ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಸರ ಎಳೆದು ಪರಾರಿ!

ಕುಂದಾಪುರ : ವಿಳಾಸ ಕೇಳುವ ನೆಪದಲ್ಲಿ ಮಹಿಳೆಯೊಬ್ಬರು ಧರಿಸಿದ್ದ 75 ಸಾವಿರ ರೂ. ಮೌಲ್ಯದ ಚಿನ್ನದ ಸರವನ್ನು ಸುಲಿಗೆ ಮಾಡಿರುವ ಘಟನೆ ನಿನ್ನೆ ತಾಲೂಕಿನ ಕಾಳಾವರ ಗ್ರಾಮದ ನಡುಬೆಟ್ಟು ಎಂಬಲ್ಲಿಂದ ವರದಿಯಾಗಿದೆ.

ನಿನ್ನೆ ಮಧ್ಯಾಹ್ನ ಸ್ಥಳೀಯ ನಿವಾಸಿ ಪದ್ದಮ್ಮ ಶೆಡ್ತಿ ಎಂಬವರು ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಆರೋಪಿ ರಸ್ತೆ ಬದಿ ಬೈಕ್ ನಿಲ್ಲಿಸಿಕೊಂಡು ಪದ್ದಮ್ಮ ಬಳಿ ಯಾರದೋ ವಿಳಾಸ ಕೇಳಿದ್ದಾನೆ.ಆಗ ಮಹಿಳೆ, ಆ ಹೆಸರಿನವರು ಇಲ್ಲಿ ಯಾರೂ ಇಲ್ಲ ಎಂದು ಹೇಳುವಷ್ಟರಲ್ಲಿ ಕುತ್ತಿಗೆಯಲ್ಲಿದ್ದ ಎರಡು ಪವನ್ ತೂಕದ ಚಿನ್ನದ ಚೈನ್‌ನ್ನು ಬಲಾತ್ಕಾರವಾಗಿ ಕಿತ್ತುಕೊಂಡು ಬೈಕ್‌ನಲ್ಲಿ ಪರಾರಿಯಾಗಿರುವುದಾಗಿ ದೂರಲಾಗಿದೆ.

ಆರೋಪಿ ಬೆನ್ನಿಗೆ ಸ್ಕೂಲ್ ಬ್ಯಾಗ್ ಹಾಕಿಕೊಂಡಿದ್ದು, ತಲೆಗೆ ಹೆಮ್ಮೆಟ್ ಹಾಕಿರುವುದಾಗಿ ಪದ್ದಮ್ಮ ಶೆಡ್ತಿ ಮಗ ಅಶೋಕ್ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

30/04/2022 10:11 am

Cinque Terre

3.84 K

Cinque Terre

0

ಸಂಬಂಧಿತ ಸುದ್ದಿ