ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಹೊಸಂಗಡಿ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ದುರ್ಮರಣ

ಕುಂದಾಪುರ: ಸೋಮವಾರ ಪೂಜಾ ಕಾರ್ಯಕ್ರಮದ ನಿಮಿತ್ತ ಚಪ್ಪರ ಹಾಕುತ್ತಿದ್ದ ವೇಳೆ ಅಡಿಕೆ ಮರದ ಕಂಬ ಕುತ್ತಿಗೆಗೆ ಬಿದ್ದ ಪರಿಣಾಮ ಹೊಸಂಗಡಿಯ ಪೇಟೆ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ರಾಮಚಂದ್ರ ಭಂಡಾರ್ಕರ್ (58) ಸಾವನ್ನಪ್ಪಿದ್ದಾರೆ.

ಮೃತ ರಾಮಚಂದ್ರ ಭಂಡಾರ್ಕರ್ ಅವರು ಸಮುದಾಯದ ಒಳಗೆ ರಾಮ್ ಮಾಮ್ ಎಂದೇ ಪ್ರಸಿದ್ದರಾಗಿದ್ದರು. ಸ್ಥಳೀಯವಾಗಿ ಎಲ್ಲಿಯೇ ಧಾರ್ಮಿಕ ಕಾರ್ಯಕ್ರಮಗಳಿದ್ದರೆ ಹಾಜರಾಗುತ್ತಿದ್ದ ರಾಮ್ ಮಾಮ್ ಪ್ರತೀ ಭಜನಾ ಕಾರ್ಯಕ್ರಮದಲ್ಲಿಯೂ ಲವಲವಿಕೆಯಿಂದ ಭಾಗವಹಿಸುತ್ತಿದ್ದವರು.

ಸೋಮವಾರ ಇಲ್ಲಿನ ಹೊಸಂಗಡಿ ಗ್ರಾಮದ ಅನಗಳ್ಳಿಬೈಲು ಎಂಬಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಪೂರ್ವ ತಯಾರಿಗೆ ಆಗಮಿಸಿದ್ದ ರಾಮಚಂದ್ರ ಭಂಡಾರ್ಕರ್ ಅವರು ಪೂಜಾ ಕಾರ್ಯಕ್ರಮದ ನಿಮಿತ್ತ ಚಪ್ಪರ ಹಾಕುತ್ತಿದ್ದರು. ಈ ಸಂದರ್ಭ ಅಡಿಕೆ ಮರದ ಕಂಬವು ಮೇಲಿಂದ ಜಾರಿತೆನ್ನಲಾಗಿದೆ. ಅದನ್ನು ತಡೆಯಲು ಹೋದ ಸಮಯ ಆಯ ತಪ್ಪಿ ಕೆಳಗೆ ಬಿದ್ದಾಗ ಅಡಿಕೆ ಮರ ರಾಮ್ ಮಾಮ್ ಅವರ ಕುತ್ತಿಗೆ ಮೇಲೆ ಬಿದ್ದಿದೆ. ತಕ್ಷಣ ಅವರನ್ನು ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದು, ರಾಮಚಂದ್ರ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢೀಕರಿಸಿದ್ದಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : PublicNext Desk
Kshetra Samachara

Kshetra Samachara

05/04/2022 03:14 pm

Cinque Terre

3.7 K

Cinque Terre

2

ಸಂಬಂಧಿತ ಸುದ್ದಿ