ಉಡುಪಿ : ಕಾನೂನಾತ್ಮಕವಾಗಿ ಕಠಿಣ ಕ್ರಮಗಳನ್ನುಜಾರಿ ಮಾಡಿದರು ಕ್ರೈಂ ಸಂಖ್ಯೆಗಳು ಏರುತ್ತಲೇ ಇವೆ. ಸದ್ಯ ಕೃಷ್ಣನಗರದಲ್ಲಿ ರಿಕ್ಷಾದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಗಳಿಂದ 2.66 ಲಕ್ಷ ಮೌಲ್ಯದ 8 ಕೆ.ಜಿ ಗಾಂಜಾ ವಶಪಡಿಸಿಕೊಂಡ ಘಟನೆ ಮಣಿಪಾಲದ ಶೀಂಬ್ರಾ ಸೇತುವೆ ಬಳಿ ಗುರುವಾರ ನಡೆದಿದೆ.
ಬಂಧಿತರನ್ನು ಮಹಾರಾಷ್ಟ್ರ ಮೂಲದ ಗೌತಮ್ ರಾಜು ಶಿಮುಂಗೆ, ಪಂಜಾಬ್ ಮೂಲದ ಜೆಸ್ವಿಂದರ್ ಸಿಂಗ್ ಹಾಗೂ ಬ್ರಹ್ಮಾವರ ಕೊಳಲಗಿರಿಯ ಕೃಷ್ಣ ಜಲಗಾರ್ ಎನ್ನಲಾಗಿದೆ.ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ್ ಅವರ ಮಾರ್ಗದರ್ಶನದಲ್ಲಿ ಹಾಗೂ ಅಡಿಷನಲ್ ಎಸ್.ಪಿ ಕುಮಾರ ಚಂದ್ರ ಹಾಗೂ ಸುಧಾಕರ ನಾಯಕ್ ಡಿ.ವೈ.ಎಸ್.ಪಿ ಉಡುಪಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಮಣಿಪಾಲ ಪೊಲೀಸ್ ನಿರೀಕ್ಷಕ ಮಂಜುನಾಥ್.ಎಂ ಗೌಡ , ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಣಿ ಹಾಗೂ ಮಣಿಪಾಲ ಪೊಲೀಸ್ ಠಾಣೆಯ ಸಿಬ್ಬಂಧಿಗಳಾದ ಪ್ರೊಬೇಶನರಿ ಪಿ.ಎಸ್.ಐ ದೇವರಾಜ್ ಸಿದ್ದಣ್ಣ ಬಿರಾದಾರ್ ಮತ್ತು ಅಮೀನ್ಸಾಬ್ ಮೌಲಾಸಾಬ್ ಅತ್ತಾರ್, ಎ.ಎಸ್.ಐ ಶೈಲೇಶ್, ಹೆಚ್.ಸಿಗಳಾದ ದಯಾಕರ್ ಪ್ರಸಾದ್, ವಿಶ್ವಜಿತ್ , ನವೀನ್, ಅಬ್ದುಲ್ ರಜಾಕ್ ಪಿ.ಸಿ ಸಂತೋಷ್ ಹೆಚ್.ಟಿ, ರೇವಣಸಿದ್ದಪ್ಪ, ಲೊಕೇಶ್ ಮತ್ತು ಆದರ್ಶ , ಬೈಂದೂರು ವೃತ್ತದ ಸಿಬ್ಬಂಧಿಗಳಾದ ಚಂದ್ರ, ಅಶೋಕ, ನವೀನ್ ಮತ್ತು ಗುರು ಪ್ರಸಾದ್ ರವರು ಈ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.
Kshetra Samachara
05/02/2021 11:09 am