ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಡುಬಿದ್ರಿ : ಕಳ್ಳತನಕ್ಕೆ ಹೊಂಚು : ಹಿಡಿಯಲು ಬಂದ ಪೊಲೀಸ್ ಗೆ ಗಾಯಗೊಳಿಸಿ ಪರಾರಿ

ಪಡುಬಿದ್ರಿ : ಕಳ್ಳತನಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯೋರ್ವನನ್ನು ಹಿಡಿಯಲು ಮುಂದಾದ ಪೊಲೀಸ್ ಸಿಬ್ಬಂದಿಯನ್ನೇ ಗಾಯಗೊಳಿಸಿ ಪರಾರಿಯಾದ ಘಟನೆ ಬುಧವಾರ ಮುಂಜಾನೆ ಪಡುಬಿದ್ರಿಯಲ್ಲಿ ನಡೆದಿದೆ.

ಪಡುಬಿದ್ರಿಯ ತೃಪ್ತಿ ಸೆಲೂನ್ ಬಳಿ ಕೈಯಲ್ಲಿ ಕಬ್ಬಿಣದ ರಾಡ್ ಹಿಡಿದು ತಿರುಗಾಡುತ್ತಿದ್ದ ವ್ಯಕ್ತಿಯನ್ನು ಕಂಡ ಪತ್ರಿಕಾ ವಿತರಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಚುರುಕುಗೊಂಡ ಪಡುಬಿದ್ರಿ ಪೊಲೀಸ್ ಸಿಬ್ಬಂದಿ ಯೋಗೀಶ್ ಸ್ಥಳಕ್ಕೆ ಧಾವಿಸಿ ಆತನ ವಶಕ್ಕೆ ಮುಂದಾದಾಗ ಆತ ಕೈಯಲ್ಲಿದ್ದ ರಾಡ್ ಬೀಸಿ ಪರಾರಿಯಾಗಿದ್ದಾನೆ.

ಈ ಸಂದರ್ಭ ಯೋಗೀಶ್ ಅವರ ಮೂಗಿನ ಭಾಗಕ್ಕೆ ಗಾಯವಾಗಿದೆ, ಈ ಬಗ್ಗೆ ಮಾಹಿತಿ ನೀಡಿದ ಪಡುಬಿದ್ರಿ ಠಾಣಾಧಿಕಾರಿ ದಿಲೀಪ್, ಕಳ್ಳನ ಪತ್ತೆಗೆ ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ.

Edited By :
Kshetra Samachara

Kshetra Samachara

07/10/2020 01:51 pm

Cinque Terre

17.84 K

Cinque Terre

0

ಸಂಬಂಧಿತ ಸುದ್ದಿ