ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: 8 ವರ್ಷಗಳ ಹಿಂದೆ ಮಲ್ಲಾರಿನಲ್ಲಿ ಮನೆಗಳ್ಳತನ; ಖತರ್ನಾಕ್ ಖದೀಮರು ಅಂದರ್

ಕಾಪು:  ಕಾಪು ಠಾಣೆ ವ್ಯಾಪ್ತಿಯ ಮಲ್ಲಾರು ಕೋಟೆ ಎಂಬಲ್ಲಿ ಮನೆಗಳ್ಳತನ ಮಾಡಿದ ಆರೋಪದ ಮೇಲೆ ಇಬ್ಬರು ಕಳ್ಳರನ್ನು ಕಾಪು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಬಂಧಿತರನ್ನು ಮಲ್ಲಾರು ನಿವಾಸಿ ಅಬ್ದುಲ್ ಸತ್ತಾರ್ (38) ಮತ್ತು ಕುತ್ಯಾರು ನಿವಾಸಿ ಅಬ್ದುಲ್ ರಹಮಾನ್ ಪುದಿನ್ ಯಾನೆ ರಹೀಂ (49) ಎಂದು ಗುರುತಿಸಲಾಗಿದೆ.

2012ರ ಜುಲೈ ನಲ್ಲಿ ಮಲಾರು ಗ್ರಾಮದ ಕೋಟೆ ಎಂಬಲ್ಲಿರುವ ಪರ್ವಿನ್ ಬಾಬು ಎಂಬವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಿಂದಿನ ಬಾಗಿಲನ್ನು ಯಾವುದೋ ಬಲವಾದ ಆಯುಧದಿಂದ ಮುರಿದು ಒಳಪ್ರವೇಶಿಸಿ ಮನೆಯ ಒಳಗೆ ಬೆಡ್ ರೂಮಿನಲ್ಲಿ ಗೋದ್ರೆಜ್ ನಲ್ಲಿದ್ದ 2 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಇನ್ನೊಂದು ರೂಮಿನಲ್ಲಿ 50,000 ಮೌಲ್ಯದ  ಬಾಕ್ಸ್ ಪಾತ್ರೆ ಪರಿಕರ, ನಳ್ಳಿ ನೀರಿನ ಬೀಗ ಡೋರ್ ಲಾಕ್ ಕಳವು ಮಾಡಿದ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಆಗಿನ ತನಿಖಾಧಿಕಾರಿ, ಸದ್ಯಕ್ಕೆ ಪತ್ತೆಯಾಗದ ಪ್ರಕರಣವೆಂದು ಪರಿಗಣಿಸಿ ‘ಸಿ’ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ನಿವೇದಿಸಿಕೊಂಡಿದ್ದರು.

ಪ್ರಕರಣ ದಾಖಲಾಗಿ 8 ವರ್ಷ ಕಳೆದಿದ್ದು, ಪ್ರಸ್ತುತ ಪ್ರಕರಣದ ಆರೋಪಿಗಳ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ಆಬುಲ್ ಸತ್ತಾರ್ (36) ಎಂಬಾತನನ್ನು ಸಿಪಿಐ ಕಾಪು ವಿಚಾರಣೆ ನಡೆಸಿದ್ದು, ಆತ ತನ್ನ ತಪ್ಪನ್ನು ಒಪ್ಪಿದ್ದು ತಾನು ಹಾಗೂ ಅಬ್ದುಲ್ ರೆಹಮಾನ್ ಫಕ್ರುದ್ದೀನ್ ಯಾನೆ ರಹೀಂ, ಇನ್ನಿಬ್ಬರು ಆರೋಪಿಗಳ ಜೊತೆ ಸೇರಿ ಕಳ್ಳತನ ಮಾಡಿರುವುದಾಗಿ ತಿಳಿಸಿದ್ದು, ಬಂಧಿಸಲಾಗಿದೆ.

ಕಳವು ಮಾಡಿದ ಚಿನ್ನದ ನೆಕ್ಲೇಸ್ ಹಾಗೂ ಚಿನ್ನದ ಬಳೆಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಚಿನ್ನದ ಅಂದಾಜು ಮೌಲ್ಯ 1,92,000 ರೂ. ಆಗಿದೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಕಾರ್ಕಳ ಉಪವಿಭಾಗ

ಪೊಲೀಸ್ ಉಪಾಧೀಕ್ಷಕ ಭರತ್ ಎಸ್ .ರೆಡ್ಡಿ ನಿರ್ದೇಶನದಲ್ಲಿ ಕಾಪು ವೃತ್ತ ನಿರೀಕ್ಷಕ ಪ್ರಕಾಶ್, ಕಾಪು ಠಾಣಾ ಅಪರಾಧ ವಿಭಾಗದ ಪಿಎಸ್ಐ ಯುನೂಸ್ ಗಡ್ಕರ್ ಮತ್ತು ಜಿಲ್ಲಾ ಪೊಲೀಸ್ ಕಚೇರಿಯ ಅಚ್ಚುತ ನಾಗರಾಜು ಹಾಗೂ ಅಪರಾಧ ಪತ್ತೆ ತಂಡದ ಸಿಬ್ಬಂದಿ ಪ್ರವೀಣ ಕುಮಾರ್, ನಾರಾಯಣ, ರಾಜೇಶ್, ಸಂದೇಶ್, ಆನಂದ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Edited By : Nirmala Aralikatti
Kshetra Samachara

Kshetra Samachara

18/12/2020 06:28 pm

Cinque Terre

11.14 K

Cinque Terre

2

ಸಂಬಂಧಿತ ಸುದ್ದಿ