ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎರ್ಮಾಳು: ಕೆಲಸವಿಲ್ಲದೆ ಮಾನಸಿಕ ಖಿನ್ನತೆ; ವ್ಯಕ್ತಿ ನಾಪತ್ತೆ

ಪಡುಬಿದ್ರಿ: ಕೆಲಸವಿಲ್ಲದೆ ಮಾನಸಿಕ ಖಿನ್ನತೆಗೊಳಗಾಗಿದ್ದ ವ್ಯಕ್ತಿಯೊಬ್ಬರು ಮನೆಯಿಂದ ಹೋದವರು, ಮರಳಿ ಬಾರದೆ ಕಾಣೆಯಾದ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಪು ತಾಲೂಕು ತೆಂಕ ಎರ್ಮಾಳ್ ಗ್ರಾಮದ ಚಂದ್ರಾವತಿ ನಿಲಯದಲ್ಲಿ ವಾಸವಾಗಿದ್ದ ಪದ್ಮನಾಭ ಕುಂದರ್ (59) ಎಂಬವರು ಕಳೆದ ಮಾರ್ಚ್‌ ತಿಂಗಳಿನಿಂದ ತನ್ನ ತಂಗಿಯ ಮನೆಯಲ್ಲಿ ವಾಸವಾಗಿದ್ದು, ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದರು.

ಈ ಬಗ್ಗೆ ಮಂಗಳೂರಿನ ವೆನ್‌‌ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಸಂದರ್ಭ ಎರಡೂ ಕಾಲುಗಳ ಬೆರಳುಗಳನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆಯಲಾಗಿತ್ತು.

ನಂತರ ಅವರ ಪತ್ನಿಯ ಮನೆಯಾದ ಸಾಗರಕ್ಕೆ ಹೋಗಿ ನವೆಂಬರ್ ನಲ್ಲಿ ವಾಪಸ್ ಬಂದಿದ್ದರು. ಬಳಿಕ ಕೆಲಸವಿಲ್ಲದ ಕಾರಣದಿಂದ ಮಾನಸಿಕ ಖಿನ್ನತೆ ಬಾಧಿಸಿ, ಡಿ.7 ರಂದು ಬೆಳಿಗ್ಗೆ ಮನೆಯಿಂದ ಹೋದವರು ವಾಪಸ್ ಬಾರದೆ ನಾಪತ್ತೆ ಯಾಗಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

14/12/2020 08:47 am

Cinque Terre

8.61 K

Cinque Terre

0

ಸಂಬಂಧಿತ ಸುದ್ದಿ