ಉಡುಪಿ: ಸೆಪ್ಟೆಂಬರ್ 28 ರಂದು ಪೆರ್ಡೂರಿನ ಕುಕ್ಕೆಹಳ್ಳಿ ಗ್ರಾಮದ 17 ರ ಹರೆಯದ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಇಮ್ತಿಯಾಜ್ ಎಂಬಾತ ಅಪಹರಿಸಿದ್ದ. ನಿನ್ನೆ ಬೈಂದೂರಿನಲ್ಲಿ ಸ್ಥಳೀಯರ ಸಹಾಯದಿಂದ ವಿದ್ಯಾರ್ಥಿನಿಯನ್ನು ರಕ್ಷಣೆ ಮಾಡಲಾಗಿದೆ. ಈ ಕೃತ್ಯ ಮಾಡಿದ ಇಮ್ತಿಯಾಜ್ ನನ್ನು ಪೊಲೀಸರು ಬಂಧಿಸಿದ್ದು, ಈತನ ಮೇಲೆ ಪೋಕ್ಸೊ ಕಾಯಿದೆಯಡಿ ಕಾನೂನು ಕ್ರಮ ಕೈಗೊಳ್ಳಬೇಕು. ಈ ಕೃತ್ಯ ಎಸಗಲು ವ್ಯವಸ್ಥಿತ ಜಾಲ ಇವನ ಜೊತೆ ಕೈಜೋಡಿಸಿದೆ. ಇದೊಂದು ಲವ್ ಜಿಹಾದ್ ಪ್ರಕರಣವಾಗಿದ್ದು, ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸಿ ಈ ಕೃತ್ಯ ಕ್ಕೆ ಸಹಕರಿಸಿದರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಆಗ್ರಹಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್, ಪ್ರಾಂತ ಬಜರಂಗದಳ ಸಂಯೋಜಕ ಸುನಿಲ್ ಕೆ.ಆರ್., ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ಜಿಲ್ಲಾ ಮಾತೃಶಕ್ತಿ ಪ್ರಮುಖ್ ಪೂರ್ಣಿಮಾ ಸುರೇಶ್ ಜೊತೆಗೆ ಬಜರಂಗದಳದ ಕಾರ್ಯಕರ್ತರು ವಿದ್ಯಾರ್ಥಿನಿಯ ಮನೆಗೆ ತೆರಳಿ ಹೆತ್ತವರಿಗೆ ಧೈರ್ಯ ತುಂಬಿದರು.
Kshetra Samachara
06/11/2020 06:51 pm