ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ಕೊರೊನಾ ಭಯ, ಆತಂಕದಿಂದ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ಕಾರ್ಕಳ: ಕೊರೊನಾ ಭಯ, ಆತಂಕದಿಂದ ವ್ಯಕ್ತಿ ಯೊಬ್ಬರು ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ರಥಬೀದಿಯ ಶ್ರೇಷ್ಠ ಬೇಕರಿ ಹಿಂಭಾಗದಲ್ಲಿ ನಡೆದಿದೆ.

ಕೃಷ್ಣ ಅಲಿಯಾಸ್ ಕಿಟ್ಟಿ (65) ಎಂಬವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

ಅವರಿಗೆ ಹಲವು ತಿಂಗಳ ಹಿಂದೆ ಕೊರೊನಾ ಪಾಸಿಟಿವ್ ಕಂಡುಬಂದಿದ್ದು, ಬಳಿಕ ಮಾನಸಿಕವಾಗಿ ನೊಂದಿದ್ದರು.

ಹಾಗೂ ಸ್ನೇಹಿತನೊಬ್ಬ ಅವರಿಗೆ ಹಣ ಕೂಡ ವಂಚಿಸಿದ್ದು, ಈ ಎಲ್ಲ ಕಾರಣಗಳಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ಶಂಕಿಸಲಾಗಿದೆ.

ಆತ್ಮಹತ್ಯೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರೂ ಒಂದು ಗಂಟೆ ಕಳೆದರೂ ಸ್ಥಳಕ್ಕೆ ಪೊಲೀಸರು ಬಾರದೇ ಇರುವುದರಿಂದ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

17/10/2020 07:54 pm

Cinque Terre

17.88 K

Cinque Terre

4

ಸಂಬಂಧಿತ ಸುದ್ದಿ