ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಇತ್ತಂಡಗಳ ನಡುವೆ ಕಿರಿಕ್ : ಕರಕಲಾಯ್ತು ಬೈಕ್

ಉಡುಪಿ: ಮದ್ಯದ ಅಮಲಿನಲ್ಲಿರುವವರ ಮಧ್ಯೆ ನಡೆದ ಕಿರಿಕ್ ನಲ್ಲಿ ಬೈಕೊಂದು ಸುಟ್ಟು ಕರಕಲಾಗಿರುವ ಘಟನೆ ಬ್ರಹ್ಮಾವರದ ಅಮ್ಮುಂಜೆಯಲ್ಲಿ ಅ.31ರ ಶನಿವಾರ ರಾತ್ರಿ ನಡೆದಿದೆ.

ಇತ್ತಂಡಗಳ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಗಿದೆ ಈ ಕುರಿತು ಈಗಾಗಲೇ ಆರು ಮಂದಿಯನ್ನು ವಶಕ್ಕೆ ತೆಗದುಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಸೂರಜ್, ಆಲ್ವಿನ್, ಮೋಹಿತ್, ಬಾಲಕೃಷ್ಣ, ಮಣಿಕಾಂತ ಹಾಗೂ ಪಪ್ಪು ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಆದರೆ ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿಲ್ಲ.

ಈ ನಡುವೆ ಮೂರು ದ್ವಿಚಕ್ರ ವಾಹನಗಳು ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ವಾಹನಗಳ ಮೇಲೆ ಶಸ್ತ್ರಾಸ್ತ್ರಗಳ ಬಳಕೆಯ ಗುರುತುಗಳಿವೆ.

ಇತ್ತಂಡಗಳ ನಡುವಿನ ಜಗಳದಿಂದಾಗಿ ಈ ಘಟನೆ ನಡೆದಿದೆ. ಎರಡು ತಂಡಗಳ ನಡುವೆ ವೈಷಮ್ಯವಿದ್ದು, ಶನಿವಾರ ರಾತ್ರಿ ನಡೆದ ಗಲಾಟೆ ಹಿಂಸಾತ್ಮಕ ರೂಪಕ್ಕೆ ತಿರುಗಿದೆ ಎನ್ನಲಾಗಿದೆ.

Edited By : Nirmala Aralikatti
Kshetra Samachara

Kshetra Samachara

01/11/2020 02:13 pm

Cinque Terre

9.56 K

Cinque Terre

0

ಸಂಬಂಧಿತ ಸುದ್ದಿ