ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೇವಾಸಿಂಧು ಕಚೇರಿಯೊಳಗೆ ನುಗ್ಗಿದ ಬಸ್: ತಪ್ಪಿದ ಭಾರೀ ಅನಾಹುತ

ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರದ ಸೇವಾಸಿಂಧು ಕಚೇರಿಗೆ ಬಸ್ ನುಗ್ಗಿದ ಘಟನೆ ಇಂದು ನಡೆದಿದೆ. ಘಟನೆಯಲ್ಲಿ ಬಸ್‌ನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಭಾನುವಾರ ರಜಾದಿನವಾಗಿದ್ದ ಹಿನ್ನೆಲೆಯಲ್ಲಿ ಸೇವಾ ಸಿಂಧು ಕಚೇರಿ ಮುಚ್ಚಿತ್ತು. ಕಚೇರಿ ಬಳಿ ಯಾರೂ ಇಲ್ಲದ ಕಾರಣ ಸಂಭವನೀಯ ಅನಾಹುತ ತಪ್ಪಿದೆ. ಬ್ರಹ್ಮಾವರ ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್ ಸ್ಟಾರ್ಟ್ ಆಗದ ಕಾರಣ ಜರ್ಕ್ ಮೂಲಕ ಸ್ಟಾರ್ಟ್ ಮಾಡಲಾಗಿತ್ತು. ಇಳಿಜಾರು ಇದ್ದಿದ್ದರಿಂದ ಬಸ್ ವೇಗವಾಗಿ ಚಲಿಸಿ, ಎದುರಿದ್ದ ತಾಲೂಕು ಪಂಚಾಯತ್ ಕಟ್ಟಡಕ್ಕೆ ನುಗ್ಗಿದೆ.

ಬಸ್‌ನಲ್ಲಿ ಚಾಲಕನಿದ್ದರೂ ತಾಂತ್ರಿಕ ದೋಷ ಉಂಟಾಗಿ ಬ್ರೇಕ್ ಕೂಡಾ ಕೆಲಸ ಮಾಡಿಲ್ಲ. ವೇಗವಾಗಿ ಬಂದ ಬಸ್ ಸೇವಾ ಸಿಂಧು ಕಟ್ಟಡಕ್ಕೆ ಢಿಕ್ಕಿ ಹೊಡೆದಿದೆ. ಘಟನೆಯಿಂದಾಗಿ ಕಟ್ಟಡದ ಮುಂಭಾಗಕ್ಕೆ ಹಾನಿಯಾಗಿದ್ದು, ಕಚೇರಿಯ ಒಳಗಿದ್ದ ಕಂಪ್ಯೂಟರ್ ಕೂಡಾ ಜಖಂಗೊಂಡಿದೆ.

Edited By : Vijay Kumar
Kshetra Samachara

Kshetra Samachara

11/10/2020 04:32 pm

Cinque Terre

11.01 K

Cinque Terre

0

ಸಂಬಂಧಿತ ಸುದ್ದಿ