ಕಾಪು: ರಿಕ್ಷಾವೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಶಿರ್ವ ಸಮೀಪದ ಬಂಟಕಲ್ಲು ಪೇಟೆಯಲ್ಲಿ ಸಂಭವಿಸಿದೆ. ಪಡುಬೆಳ್ಳೆ ಪಾಂಬೂರು ನಿವಾಸಿ ಶಂಕರ ಕೋಟ್ಯಾನ್(61) ಮೃತ ಬೈಕ್ ಸವಾರ. ಬಂಟಕಲ್ಲು ಬೈದಶ್ರೀ ಫ್ಯಾನ್ಸಿ ಸ್ಟೋರ್ ನಡೆಸಿಕೊಂಡಿದ್ದ ಇವರು, ಪೆಟ್ರೋಲ್ ಹಾಕಲು ಪೆಟ್ರೋಲ್ ಪಂಪ್‌ಗೆ ಬೈಕಿನಲ್ಲಿ ಹೋಗುತ್ತಿದ್ದಾಗ ಶಂಕರಪುರ ಕಡೆಯಿಂದ ಬಂಟಕಲ್ಲು ಕಡೆ ಬರುತ್ತಿದ್ದ ರಿಕ್ಷಾ ರಸ್ತೆಗೆ ಅಳವಡಿಸಿದ್ದ ಬ್ಯಾರಿಕೇಡ್‌ಗೆ ಡಿಕ್ಕಿಯಾಗಿ ಬಳಿಕ ಬೈಕಿಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.ಅಪಘಾತದಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಶಂಕರ್ ಕೋಟ್ಯಾನ್, ಮಣಿಪಾಲದ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಮೃತರು ಪತ್ನಿ, ಸಹೋದರ ಸಹೋದರಿಯರನ್ನು ಅಗಲಿದ್ದಾರೆ..ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
07/10/2022 01:55 pm