ಕೋಟ : ಶಿರಿಯಾರದ ನಿವಾಸಿ ಜಯಶೀಲ ಶೆಟ್ಟಿ (36) ಎಂಬವರು ಜೂ.19ರಂದು ಬಾರ್ಕೂರಿನಲ್ಲಿರುವ ಅಕ್ಕನ ಮನೆಗೆ ಹೋಗುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಪ್ಪಳದಿಂದ ಕಲ್ಮಾಡಿಯಲ್ಲಿರುವ ಮಗಳ ಮನೆಗೆ ಬಂದಿದ್ದ ಕಲ್ಲಪ್ಪ ಎಂಬವರು ಜೂ.11ರಂದು ರಾತ್ರಿ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಅನಾರೋಗ್ಯ ಸಮಸ್ಯೆಯಿಂದ ಮಾನಸಿಕವಾಗಿ ನೊಂದಿದ್ದ ಅರೆಶಿರೂರು ಗ್ರಾಮದ ದ್ಯಾಸಮಕ್ಕಿ ನಿವಾಸಿ ನರಸಿಂಹ ಮರಾಠಿ ಎಂಬವರ ಪತ್ನಿ ಭಾರತಿ ಮರಾಠಿ ಎಂಬವರು ಜೂ.19ರಂದು ಮಧ್ಯಾಹ್ನ ಮನೆ ಯಿಂದ ಹೊದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
21/06/2022 09:05 pm