ವರದಿ : ಬಿ ಸಂಪತ್ ನಾಯಕ್ ಕಾರ್ಕಳ
ಕಾರ್ಕಳ : ಅಸಮರ್ಪಕ ಹಾಗೂ ಕಳಪೆ ಕಾಮಗಾರಿ ನಡೆಸಿದ ಪರಿಣಾಮ ರಸ್ತೆಗೆ ಹಾಕಿದ ಜಲ್ಲಿ ಕಲ್ಲೊಂದು ವಾಹನ ಚಕ್ರಕ್ಕೆ ಸಿಲುಕಿ ಹಾರಿ ಅಂಗಡಿಯೊಳಗಿದ್ದ ರೆಫ್ರೀಜರೇಟರ್ ಗೆ ಬಡಿದು ಸೊತ್ತು ಹಾನಿಯಾದ ಘಟನೆ ಕಾರ್ಕಳ ಮೂರು ಮಾರ್ಗದಲ್ಲಿ ನಡೆದಿದೆ.
ಮೂರು ಮಾರ್ಗ ನಿವಾಸಿ ಎಂಜಿ ಪ್ರಭು ಅವರ ರೆಫ್ರೀಜರೇಟರ್ ಹಾನಿಯಾಗಿದ್ದು.ಇದೀಗ ರೆಫ್ರೀಜರೇಟರ್ ಪೊಟೊ ಸಾಮಜಿಕ ಜಾಲತಾಣದಲ್ಲಿ ಸಿಕ್ಕಾ ಪಟ್ಟೆ ವೈರಲ್ ಅಗುತ್ತಿದೆ. ಜತೆಗೆ ರಸ್ತೆಯಲ್ಲಿ ಬೃಹತ್ ಕಾರದ ಹೊಂಡ ಗುಂಡಿ ನಿರ್ಮಾಣವಾಗಿದ್ದು ಈ ಬಗ್ಗೆ ಜನ ಪ್ರತಿನಿಧಿಗಳಾಗಲಿ ಅಥವಾ ಪುರಸಭೆ ಅಧಿಕಾರಿಗಳಾಗಲಿ ತುಟ್ಟಿಕ್ ಪಿಟಿಕ್ ಅನ್ನುತ್ತಿಲ್ಲ. ಎಂದು ಸಾರ್ವಜನಿಕರು ಸ್ಥಳೀಯರ ಜನ ಪ್ರತಿನಿಧಿ ಹಾಗೂ ಅಧಿಕಾರಿಗಳ ವಿರುದ್ದ ಹಿಡಿಶಾಪ ಹಾಕುತ್ತಿದ್ದಾರೆ.
Kshetra Samachara
18/09/2020 07:45 am