ಕಾಪು: ಬಸ್ ಚಾಲಕನ ಅವಾಂತರದಿಂದ ಗೂಡ್ಸ್ ವಾಹನವೊಂದು ಮಗುಚಿ ಬಿದ್ದು ಓರ್ವ ಗಾಯಗೊಂಡ ಘಟನೆ ಪಡುಬಿದ್ರಿ ಠಾಣಾ ವ್ಯಾಪ್ತಿಯ ಉಚ್ಚಿಲದಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಉಡುಪಿ ಕಡೆಯಿಂದ ಮಂಗಳೂರಿನತ್ತ ಚಲಿಸುತ್ತಿದ್ದ ಗೂಡ್ಸ್ ವಾಹನವನ್ನು ಹಿಂದಿಕ್ಕಿದ ಬಸ್ಸಿನ ಚಾಲಕನ ಓವರ್ ಟೇಕ್ ಭರದಿಂದಾಗಿ ನಿಯಂತ್ರಣ ಕಳೆದುಕೊಂಡ ಗೂಡ್ಸ್ ವಾಹನ ಹೆದ್ದಾರಿಯಿಂದ ಕೆಳಗಿಳಿದು ಮಗುಚಿ ಬಿದ್ದಿದೆ. ಘಟನೆಯಿಂದ ಗೂಡ್ಸ್ ವಾಹನದಲ್ಲಿದ್ದ ಓರ್ವ ಗಾಯಗೊಂಡಿದ್ದು, ಉಡುಪಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
Kshetra Samachara
30/10/2020 10:05 am