ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು : ಅಲೆಮಾರಿ ನಿರ್ಗತಿಕರಿಗೆ ಪುನರ್ವಸತಿ ಭರವಸೆ..!?

ಚಿಕ್ಕನಾಯಕನಹಳ್ಳಿ: ತಾಲೂಕಿನ ಹುಳಿಯಾರು ಅಮಾನಿಕೆರೆ ದಡದಲ್ಲಿ ಕಳೆದ ಮೂರ್ನಾಲ್ಕು ದಶಕಗಳಿಂದಲೂ ವಾಸವಿರುವ ಅಲೆಮಾರಿ ನಿರ್ಗತಿಕ ನಿವಾಸಿಗಳ ಗುಡಿಸಿಲುಗಳು ಕಳೆದ ಒಂದು ವಾರದಿಂದ ಬಿದ್ದಂತಹ ಮಳೆಗೆ ಕೆರೆ ತುಂಬುತ್ತಿರುವ ಹಿನ್ನೆಲೆಯಲ್ಲಿ ಜಲಾವೃತಗೊಂಡು ಜನರು ಸಂಕಷ್ಟದಲ್ಲಿದ್ದಾರೆ.

120ಕ್ಕೂ ಹೆಚ್ಚು ಕುಟುಂಬಗಳು ಜಲಪ್ರಳಯಕ್ಕೆ ಬೀದಿ ಪಾಲಾಗಲಿದ್ದು ,ತಮಗೆ ಶಾಶ್ವತ ಪುನರ್ ವಸತಿ ಸೌಕರ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಕಳೆದ ಎರಡು ದಿನಗಳಿಂದಲೂ ಪಟ್ಟಣ ಪಂಚಾಯ್ತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದಂತ ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು ತಹಶೀಲ್ದಾರ್ ಅವರೊಂದಿಗೆ ಚರ್ಚಿಸಿ ನಿರಾಶ್ರಿತರಿಗೆ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಅಂತ್ಯಗೊಂಡಿದೆ.

ಶೀಘ್ರ ಸಮಸ್ಯೆಗೆ ಇತ್ಯರ್ಥ ಭರವಸೆ ನೀಡಿದ ತಹಶೀಲ್ದಾರ್ ಮತ್ತು ಪ್ರತಿಭಟನೆಗೆ ಬೆಂಬಲಿಸಿದ ಶಾಸಕರ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ವರದಿ: ರಾಘವೇಂದ್ರ ದಾಸರಹಳ್ಳಿ, ಪಬ್ಲಿಕ್ ನೆಕ್ಸ್ಟ್, ತುಮಕೂರು

Edited By : Nagesh Gaonkar
PublicNext

PublicNext

12/09/2022 02:48 pm

Cinque Terre

18.3 K

Cinque Terre

0

ಸಂಬಂಧಿತ ಸುದ್ದಿ