ತುಮಕೂರು: ಬ್ರಿಟಿಷರು ಭಾರತವನ್ನು ಒಡೆದು ಆಳಿದಂತೆ ಕಾಂಗ್ರೆಸ್ ಪಕ್ಷವೂ ದೇಶವನ್ನು 50 ವರ್ಷ ಬ್ರಿಟಿಷರ ಮಾದರಿಯಲ್ಲಿ ಒಡೆದು ಆಳಿದೆ. ಭಾರತ ಜೋಡಿಸೋ ಕೆಲಸ ಮಾಡಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್ ವಾಗ್ದಾಳಿ ನಡೆಸಿದ್ದಾರೆ.
ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಹಾಗೂ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಭಾರತ್ ಜೋಡೋ ವಿರುದ್ಧ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಒಂದು ಸಮಾಜದ ವೋಟ್ ಪಡೆಯಲು ಕಾಂಗ್ರೆಸ್ ವೋಟ್ ಬ್ಯಾಂಕ್ ಪಾಲಿಟಿಕ್ಸ್ ಮಾಡುತ್ತಿದೆ. ಅವರಿಗೆ ಭಾರತ ಜೋಡಿಸುವ ಯಾವುದೇ ನೈತಿಕತೆ ಇಲ್ಲ. ಬ್ರಿಟಿಷರು ಭಾರತವನ್ನು ಒಡೆದು ಆಳಿದಂತೆ ಕಾಂಗ್ರೆಸ್ ಪಕ್ಷ ಭಾರತವನ್ನು 50 ವರ್ಷ ಒಡೆದು ಆಳಿದೆ. ಇವರು ಭಾರತವನ್ನು ಒಡೆದಿದ್ದು ಬಿಟ್ಟರೆ ಜೋಡಿಸುವ ಕೆಲಸ ಮಾಡಿಲ್ಲ ಎಂದು ಹರಿಹಾಯ್ದರು.
PublicNext
09/10/2022 06:54 pm