ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾವಗಡ ತಾಲೂಕಿಗೆ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಭೇಟಿ

ಪಾವಗಡ ಪಟ್ಟಣದ ತಾಲೂಕು ಕಚೇರಿಗೆ ಪ್ರತಿ ಮಂಗಳವಾರ ಜಿಲ್ಲೆಯ ಒಂದೊಂದು ತಾಲೂಕಿನ ತಾಲೂಕು ಕಚೇರಿಗಳಿಗೆ ಭೇಟಿ ನೀಡಬೇಕು ಎಂದು ಸರ್ಕಾರದ ಆದೇಶದಂತೆ ತುಮಕೂರು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಹಾಗೂ ಅಪರ ಜಿಲ್ಲಾಧಿಕಾರಿ ಕೆ ಚನ್ನಬಸಪ್ಪ ಮಧುಗಿರಿ ಉಪವಿಭಾ ಗಾಧಿಕಾರಿ ಸೋಮಪ್ಪ ಕಡುಕೋಳ ಅವರು ಭೇಟಿ ನೀಡಿ ತಾಲೂಕು ಕಚೇರಿಯ ಕಡತಗಳನ್ನು ಪರಿಶೀಲಿಸಿದ್ದಾರೆ, ಇನ್ನೂ ಪಾವಗಡ ತಾಲೂಕಿ ನಾದ್ಯಂತ ಹಾಗಿರುವಂತಹ ಮಳೆಯ ಅವಾಂತರಗಳು ಬೆಳೆ ನಷ್ಟ ಇನ್ನಿತರ ಸಮಸ್ಯೆಗಳ ಬಗೆಗಿನ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ಇಂದು ಪಡೆದುಕೊಂಡಿದ್ದಾರೆ.

ಇನ್ನು ಇದೆ ವೇಳೆ ಪಾವಗಡ ತಹಶೀಲ್ದಾರ್ ವರದರಾಜು, ಶಿರಸ್ತೆದಾರ ಎನ್.ಮೂರ್ತಿ, ಗ್ರೇಟ್ 2 ತಹಸೀಲ್ದಾರ್ ಸುಮತಿ, ಕಸಬಾ ಆರ್. ಐ ರಾಜಗೋಪಾಲ್ ಸೇರಿ ಮೂರು ಹೋಬಳಿಗಳ ಆರ್ ಐ ಗಳು ಮತ್ತು ತಾಲೂಕು ಕಚೇರಿಯ ಸಿಬ್ಬಂದಿ ಇದೆ ವೇಳೆ ಹಾಜರಿದ್ದು ಈ ಒಂದು ಸಭೆಯಲ್ಲಿ ಭಾಗವಹಿಸಿ ತಾಲೂಕಿನ ಮಾಹಿತಿಯನ್ನು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಅವರಿಗೆ ನೀಡಲಾಗಿದೆ.

Edited By : PublicNext Desk
Kshetra Samachara

Kshetra Samachara

11/10/2022 06:17 pm

Cinque Terre

2.62 K

Cinque Terre

0