ತುಮಕೂರು : ಕೋಲಾರದ ಉಳ್ಳೇರಹಳ್ಳಿ ಗ್ರಾಮದ ದಲಿತ ಕುಟುಂಬದ ಮೇಲೆ ದೌರ್ಜನ್ಯ ಪ್ರಕರಣ ಮಾಸುವ ಮುನ್ನವೇ ತುಮಕೂರು ಜಿಲ್ಲೆಯಲ್ಲಿ ಮತ್ತೊಂದು ಪ್ರಕರಣ ನಡೆದಿದೆ.
ಜಿಲ್ಲೆಯ ಗುಬ್ಬಿ ತಾಲ್ಲೂಕು ನಿಟ್ಟೂರಿನ ಮುಳಕಟ್ಟಮ್ಮ ದೇವಾಲಯದಲ್ಲಿ ಪೂಜೆಗೆ ಬಂದಿದ್ದ ದಲಿತ ಕುಟುಂಬವನ್ನು ಪೂಜೆ ಮಾಡದೇ ಪೂಜಾಪರಿಕರ ವಾಪಸ್ಸ್ ಕಳುಹಿಸಿ ಅಪಮಾನ ಮಾಡಲಾಗಿದೆ.
ಹೌದು ನಿಟ್ಟೂರು ಗ್ರಾಮದ ಅನಿಲ್ ರಾಜ್ ತಮ್ಮ ಕುಟುಂಬ ಸಮೇತ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಬಂದಿದ್ದರು. ಈ ವೇಳೆ ದಲಿತ ಎಂಬ ಕಾರಣಕ್ಕೆ ಪೂಜೆ ಸಲ್ಲಿಸಲು ದೇವಸ್ಥಾನದ ಒಳಗೆ ಬರದಂತೆ ಅರ್ಚಕ ತಡೆದಿದ್ದಲ್ಲದೆ,ದೇವಸ್ಥಾನದ ಕಮಿಟಿಯಲ್ಲಿ ತೀರ್ಮಾನ ಮಾಡಲಾಗಿದೆ ಪೂಜೆ ಮಾಡುವುದಿಲ್ಲ ಎಂದು ವಾಗ್ವಾದ ನಡೆಸಿ ವಾಪಸ್ ಕಳಿಸಿದ್ದಾರೆ.
ಅರ್ಚಕ ಪೂಜೆ ಪರಿಕರಗಳನ್ನು ವಾಪಸ್ ಕಳುಹಿಸುವ ಘಟನೆ ಮೊಬೈಲ್ ನಲ್ಲಿ ಸೆರೆಯಾಗಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
PublicNext
13/10/2022 09:53 am