ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಪ್ರೀತಿಸಿದ ಯುವತಿ ಮನೆ ಮುಂದೆಯೇ ಯುವಕ ಆತ್ಮಹತ್ಯೆ

ತುಮಕೂರು: ಪ್ರೀತಿಸಿದ ಹುಡುಗಿ ಮನೆಯವರು ಮದುವೆ ಮಾಡಿಕೊಡಲು ನಿರಾಕರಣೆ ಆರೋಪ ಹಿನ್ನೆಲೆಯಲ್ಲಿ ಹುಡುಗಿ ಮನೆ ಮುಂದೆಯೇ ಯುವಕ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರೋ ಘಟನೆ ತುಮಕೂರಿನ ಜಯನಗರ ಬಳಿಯ ಚನ್ನಪ್ಪನಪಾಳ್ಯದಲ್ಲಿ ನಡೆದಿದೆ.

ಮಂಜುನಾಥ್ (32), ಆತ್ಮಹತ್ಯೆಗೆ ಶರಣಾದ ಯುವಕನಾಗಿದ್ದು, ಟಿಟಿ ವಾಹನದ ಚಾಲಕನಾಗಿದ್ದ ಮಂಜುನಾಥ್, ಕೆಲ ತಿಂಗಳಿಂದ ಮಂಜುನಾಥ್ ಮನೆ ಪಕ್ಕದ ಮನೆ ಹುಡುಗಿಯನ್ನ ಲವ್ ಮಾಡುತ್ತಿದ್ದನು.

ಇಬ್ಬರು ಮದುವೆಯಾಗಲು ಒಪ್ಪಿದ್ರು. ಮದುವೆ ಮಾಡಿಕೊಡುವಂತೆ ಯುವತಿ ಮನೆಯವರನ್ನ ಕೇಳಿದ್ದ ಮಂಜುನಾಥ ಗೆ ಹುಡುಗಿ ಮನೆಯವರು ಮದುವೆ ಮಾಡಿಕೊಡಲು ನಿರಾಕರಿಸಿದ್ದರು. ಇದರಿಂದ ಬೇಸತ್ತ ಯುವಕ ತಡರಾತ್ರಿ ಯುವತಿ ಮನೆ ಮುಂದೆಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸ್ಥಳಕ್ಕೆ ಜಯನಗರ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದರು. ಮೃತದೇಹ ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

Edited By : PublicNext Desk
PublicNext

PublicNext

08/12/2024 09:10 am

Cinque Terre

12.03 K

Cinque Terre

0