ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಕ್ಷುಲ್ಲಕ ವಿಚಾರಕ್ಕೆ; ಎರಡು ಸಮುದಾಯಗಳ ನಡುವೆ ಬೀದಿ ರಂಪಾಟ!

ಪಾವಗಡ: ದಲಿತರ ಕಾಲೋನಿ ನೀರು ರೆಡ್ಡಿ ಸಮುದಾಯ ಮನೆಯ ಬಳಿಯ ಮುಖ್ಯ ಕಾಲುವೆಗೆ ಸಂಪರ್ಕ ಮಾಡಲು ನಡೆಸುತ್ತಿದ್ದ, ಕಾಮಗಾರಿಯನ್ನು ಮಾಡದಂತೆ ಅಡ್ಡಿ ಪಡಿಸಿ ಮಾರಾಮಾರಿ ನಡೆದ ಘಟನೆ ಪಾವಗಡ ತಾಲೂಕಿನ ನಾಗಲ ಮಡಿಕೆ ರಾಪ್ಟೆ ಗ್ರಾಮದಲ್ಲಿ ನಡೆದಿದೆ.

ರವೀಂದ್ರ ರೆಡ್ಡಿ, ಹನುಮಂತರೆಡ್ಡಿ,ಪೋತರೆಡ್ಡಿ ಮತ್ತವರ ಪತ್ನಿಯರಾದ ಶೈಲಜಾ, ಚಿದಂಬರಾ,ಸುಜಾತ ಮತ್ತು ಇವರ ಸಂಬಂಧಿಕರು ಸೇರಿ ದಲಿತ ಸಮುದಾಯ ದವರನ್ನು ಅವಾಚ್ಛ ಶಬ್ದಗಳಿಂದ ನಿಂದಿಸಿ ಹೆಣ್ಣು ಮಕ್ಕಳ ಮೇಲೆ ದೌರ್ಜನವೆಸಗಿ, ಹೊಡೆದು ಚರಂಡಿ ಕಾಮಗಾರಿಗೆ ಅಡ್ಡಿಪಡಿಸಿದ್ದಾರೆ.

ಸಿಪಿಐ ಕಾಂತ ರೆಡ್ಡಿ ಮತ್ತು ತಾಲೂಕು ಪಂಚಾಯಿತಿ ಶಿವರಾಜಯ್ಯ ಸಮ್ಮುಖದಲ್ಲಿ ಕೈ ಕೈ ಮಿಲಾಯಿಸಿ ಗ್ರಾಮಸ್ಥರು ಕಿತ್ತಾಡಿಕೊಂಡಿದ್ದಾರೆ. ಇವರ ಜಗಳ ತಡೆಯಲು ಹೋದಂತಹ ಸಿಪಿಐ ಅವರ ಐಡಿ ಕಾರ್ಡ್ ಕಿತ್ತು ಹಾಕಿ ಮಹಿಳಾ ಕಾನ್ಸ್ಟೇಬಲ್ ಅವರಿಗೆ ಬಾಯಿಯಿಂದ ಕಚ್ಚಿ ಪೊಲೀಸರನ್ನು ಸಹ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ತಿಳಿದ ಮಾದಿಗ ದಂಡೋರ ಕಾರ್ಯ ಅಧ್ಯಕ್ಷರಾದ ನರಸಿಂಹಪ್ಪ ರಾಪ್ಟೆ,ಮಹಿಳಾ ಅಧ್ಯಕ್ಷೆ ಲಕ್ಷ್ಮಿ ದೇವಮ್ಮ, ತುಮಕೂರು ಜಿಲ್ಲಾಧ್ಯಕ್ಷ ರಾದ ವಿಜಯ ಬಸವರಾಜು, ಜಿಲ್ಲಾ ಕಾರ್ಯದರ್ಶಿಯಾದ ರವೀಂದ್ರಮ್ಮ, ಮತ್ತು ಮಾದಿಗ ದಂಡೋರ ತಾಲೂಕ ಅಧ್ಯಕ್ಷರಾದ ಕಡಮಲ ಕುಂಟೆ ಹನುಮಂತ ರಾಯಪ್ಪ ಸೇರಿದಂತೆ ಇತರರು ಮಧ್ಯಪ್ರವೇಶಿಸಿ ಪೊಲೀಸರ ಮತ್ತು ಅಧಿಕಾರಿಗಳ ನೇತೃತ್ವದಲ್ಲಿ ಸಮಸ್ಯೆಯನ್ನು ಇತ್ಯರ್ಥ ಗೊಳಿಸಿದ್ದಾರೆ. ಈ ಶತಮಾನದಲ್ಲೂ ಇಂತಹ ಘಟನೆ ನಡೆದಿರುವುದು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

ವರದಿ: ರಾಘವೇಂದ್ರ ದಾಸರಹಳ್ಳಿ ಪಬ್ಲಿಕ್ ನೆಕ್ಸ್ಟ್, ತುಮಕೂರು

Edited By : Nagesh Gaonkar
PublicNext

PublicNext

12/10/2022 10:31 pm

Cinque Terre

42.49 K

Cinque Terre

1