ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IND vs WI T20: ಭಾರತದ ಅಬ್ಬರಕ್ಕೆ ಮತ್ತೆ ಮಣಿದ ವಿಂಡೀಸ್

ಶ್ರೇಯಸ್ ಅಯ್ಯರ್ ಅರ್ಧಶತಕ, ರವಿ ಬಿಷ್ಣೋಯಿ ಹಾಗೂ ಅಕ್ಷರ್ ಪಟೇಲ್ ಅದ್ಭುತ ಬೌಲಿಂಗ್ ಪ್ರದರ್ಶನದಿಂದ ಭಾರತವು ವೆಸ್ಟ್ ಇಂಡೀಸ್ ವಿರುದ್ಧ 88 ರನ್‌ಗಳಿಂದ ಗೆಲುವು ಸಾಧಿಸಿದೆ‌. ಇದರೊಂದಿಗೆ ಭಾರತವು 4-1 ಅಂತರದಿಂದ ಸರಣಿಯನ್ನು ಗೆದ್ದು ಬೀಗಿದೆ.

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಕೊನೆಯ ಹಾಗೂ 5ನೇ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭಾರತವು 7 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತ್ತು. ಭಾರತದ ಪರ ಶ್ರೇಯಸ್ ಅಯ್ಯರ್ 64 ರನ್ ಹಾಗೂ ದೀಪಕ್ ಹೂಡಾ 38 ರನ್ ಗಳಿಸಿದ್ದರು.

ಬಳಿಕ ಬ್ಯಾಟಿಂಗ್ ಮಾಡಿದ 15.4 ಓವರ್‌ಗಳಲ್ಲಿ 100 ರನ್ ಗಳಿಸಿ ಆಲೌಟ್ ಗೆ ತುತ್ತಾಗಿ ಸೋಲು ಒಪ್ಪಿಕೊಂಡಿತು. ಭಾರತದ ಪರ ರವಿ ಬಿಷ್ಣೋಯಿ 4 ವಿಕೆಟ್, ಅಕ್ಷರ್ ಪಟೇಲ್ ಹಾಗೂ ಕುಲದೀಪ್ ಯಾದವ್ ತಲಾ 3 ವಿಕೆಟ್ ಪಡೆದುಕೊಂಡರು.

Edited By : Vijay Kumar
PublicNext

PublicNext

08/08/2022 07:14 am

Cinque Terre

25.54 K

Cinque Terre

1

ಸಂಬಂಧಿತ ಸುದ್ದಿ