ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಪುರುಷರ ಫ್ರೀಸ್ಟೈಲ್ ಕುಸ್ತಿ 125 ಕೆಜಿ ವಿಭಾಗದಲ್ಲಿ ಮೋಹಿತ್ ಗ್ರೇವಾಲ್ ಗೆ ಕಂಚು ಬಂದಿದೆ. ಟುಂಗಾದ ಟಿಜರ್ ಲಿಲ್ಲಿ ಕಾಕರ್ ವಿರುದ್ಧ ಗೆದ್ದು ಬೀಗಿದ್ದಾರೆ. ಇನ್ನು ಅನ್ಶು ಮಲಿಕ್ ಕೂಡ 57 ಕೆಜಿ ತೂಕ ವಿಭಾಗದಲ್ಲಿ ಬೆಳ್ಳಿಗೆ ಮುತ್ತಿಕ್ಕಿದ್ದಾರೆ.ಅಂತಿಮ ಪಂದ್ಯದಲ್ಲಿ ನೈಜೀರಿಯಾದ ಒಡುನಾಯೊ ಫೋಲ್ಆಡೊ ವಿರುದ್ಧ 6-4 ಅಂತರದಿಂದ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.
ಸದ್ಯ ಕಾಮನ್ ವೆಲ್ತ್ನಲ್ಲಿ ಭಾರತ ಬರೋಬ್ಬರಿ 26 ಪದಕಗಳನ್ನ ಗೆಲ್ಲೋ ಮೂಲಕ ಇತಿಹಾಸ ನಿರ್ಮಿಸಿದೆ. 25 ಪದಕಗಳಲ್ಲಿ ಬರೋಬ್ಬರಿ 9 ಬಂಗಾರದ ಪದಕ, 9 ಬೆಳ್ಳಿ ಮತ್ತು 8 ಕಂಚು ಪದಕಗಳು ಇದರಲ್ಲಿ ಸೇರಿವೆ.
ಇನ್ನು ಪದಕ ಗೆದ್ದ ಎಲ್ಲಾ ಆಟಗಾರರಿಗೂ ಪ್ರಧಾನಿ ಮೋದಿಯಿಂದ ಸೇರಿದಂತೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ಸೆಲೆಬ್ರೆಟಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ.
PublicNext
06/08/2022 07:51 am