ಬರ್ಮಿಂಗ್ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್ನ (CWG 2022) ಲಾನ್ ಬಾಲ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತ ಮಹಿಳಾ ತಂಡವು ಚರಿತ್ರೆ ಸೃಷ್ಟಿಸಿದೆ.
ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವನ್ನು 17-10 ಅಂತರದಿಂದ ಸೋಲಿಸುವ ಮೂಲಕ ಭಾರತೀಯ ಮಹಿಳೆಯರು ಈ ವಿಶೇಷ ಸಾಧನೆ ಮಾಡಿದ್ದಾರೆ. 1930 ರಿಂದ ಲಾನ್ ಬಾಲ್ ಕ್ರೀಡೆಯು ಕಾಮನ್‌ವೆಲ್ತ್ ಕ್ರೀಡಾಕೂಟದ ಭಾಗವಾಗಿದೆ. 22 ವರ್ಷಗಳಲ್ಲಿ ಭಾರತ ತಂಡ ಈ ಕ್ರೀಡೆಯಲ್ಲಿ ಯಾವುದೇ ಪದಕ ಗೆದ್ದಿಲ್ಲ. ಇದೀಗ ಭಾರತದ ತಂಡದ ಲವ್ಲಿ ಚೌಬೆ , ಪಿಂಕಿ , ನಯನ್ಮೋನಿ ಸೈಕಿಯಾ ಮತ್ತು ರೂಪಾ ರಾಣಿ ಟಿರ್ಕಿ ಒಳಗೊಂಡ ತಂಡವು ಚಿನ್ನದ ಪದಕ ಗೆಲ್ಲುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.
PublicNext
03/08/2022 06:59 am