ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಂಜು ಸ್ಯಾಮ್ಸನ್‌ರನ್ನ ಕೈಬಿಡಬೇಡಿ ಎಂದ ರೋಹನ್ ಗವಾಸ್ಕರ್

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಕೊನೆಯ ಹಾಗೂ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದಿಂದ ಸಂಜು ಸ್ಯಾಮ್ಸನ್ ಅವರನ್ನು ಕೈಬಿಡಬಾರದು ಎಂದು ಮಾಜಿ ಕ್ರಿಕೆಟರ್ ರೋಹನ್ ಗವಾಸ್ಕರ್ ಹೇಳಿದ್ದಾರೆ.

"ಸಂಜು ಬಗ್ಗೆ ಜನರು ಹೊಂದಿರುವ ದೂರು ಏನೆಂದರೆ, ಅವರು ಸಾಕಷ್ಟು ಸ್ಥಿರವಾಗಿಲ್ಲ. ವೆಸ್ಟ್ ವಿಂಡೀಸ್ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅರ್ಧಶತಕ ದಾಖಲಿಸಿ ಮಿಂಚಿದ್ದಾರೆ. ಅವರು ರನ್ ಗಳಿಸುತ್ತಿರುವಾಗ ತಂಡದಿಂದ ಡ್ರಾಪ್ ಮಾಡಿದರೆ, ತಂಡದಲ್ಲಿ ಏನಾಗುತ್ತಿದೆ ಎಂದು ಸ್ಯಾಮ್ಸನ್ ಯೋಚಿಸುತ್ತಾರೆ. ಹೀಗಾಗಿ ಅವರಿಗೆ ಮೂರನೇ ಏಕದಿನ ಪಂದ್ಯದಲ್ಲಿ ಅವಕಾಶ ನೀಡಬೇಕು" ಎಂದು ಅಭಿಪ್ರಾಯಪಟ್ಟಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಸ್ಯಾಮ್ಸನ್ 54 (51) ರನ್ ಗಳಿಸಿದ್ದರು.

Edited By : Vijay Kumar
PublicNext

PublicNext

27/07/2022 03:56 pm

Cinque Terre

16.72 K

Cinque Terre

0

ಸಂಬಂಧಿತ ಸುದ್ದಿ