ಪಾಕಿಸ್ತಾನ್: ಇಂಡಿಯನ್ ಟೀಂ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನ ಡ್ರಾಪ್ ಮಾಡೋ ಸೆಲೆಕ್ಟರ್ ಇನ್ನೂ ಹುಟ್ಟಿಯೇ ಇಲ್ಲ ಎಂದು ಪಾಕಿಸ್ತಾನದ ಮಾಜಿ ಆಟಗಾರ ರಶೀದ ಲತೀಫ್ ಹೇಳಿದ್ದಾರೆ.
ವಿರಾಟ್ ಕೊಹ್ಲಿಯನ್ನ ರನ್ ಮಷಿನ್ ಅಂತಲೇ ಕರೆಯುತ್ತಾರೆ. ಆದರೆ, ಕಳೆದ ಮೂರು ವರ್ಷಗಳಿಂದ ವಿರಾಟ್ ಕೊಹ್ಲಿ ಒಂದೇ ಒಂದು ಶತಕ ಹೊಡೆದಿಲ್ಲ.ಔಟ್ ಆಫ್ ಫಾರ್ಮ್‌ನಿಂದಾಗಿ ಕೊಹ್ಲಿ ಭಾರೀ ಟೀಕೆಗೂ ಗುರಿ ಆಗಿದ್ದಾರೆ.
ಈ ಒಂದು ಕಾರಣಕ್ಕೇನೆ ಟೀಮ್ ಇಂಡಿಯಾದ ಮಾಜಿ ಆಟಗಾರರು ಕೊಹ್ಲಿಯನ್ನ ಕೈಬಿಡಬೇಕು ಎಂದು ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಕೊಹ್ಲಿ ಪರ ಲತೀಫ್ ಈಗ ಹೀಗೆ ಬ್ಯಾಟಿಂಗ್ ಮಾಡಿದ್ದಾರೆ.
PublicNext
17/07/2022 07:58 am