ಫ್ರೆಂಚ್ ಟೆನಿಸ್ ಆಟಗಾರ ಉಗೊ ಹಂಬರ್ಟ್ ಅವರು ವಿಂಬಲ್ಡನ್ ಎರಡನೇ ಸುತ್ತಿನ ಪಂದ್ಯಕ್ಕೆ ಕ್ಯಾಸ್ಪರ್ ರೂಡ್ ವಿರುದ್ಧ ಪಂದ್ಯದಲ್ಲಿ ರಾಕೆಟ್ ಇಲ್ಲದೆ ಮೈದಾನಕ್ಕೆ ಇಳಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಳೆಯಿಂದಾಗಿ 90 ನಿಮಿಷ ತಡವಾಗಿ ಆರಂಭವಾದ ಪಂದ್ಯದಲ್ಲಿ ಉಗೋ ಅವರ ತಪ್ಪಿನಿಂದಾಗಿ ಮತ್ತಷ್ಟು ವಿಳಂಬವಾಯಿತು. ಈ ವೇಳೆ ತಮ್ಮ ಸಹಾಯಕ ರಾಕೆಟ್‌ಗಳನ್ನು ತಂದುಕೊಡುತ್ತಿದ್ದಂತೆ ಉಗೊ ಅವರ ಮುಖದಲ್ಲಿ ನಗು ಅರಳಿತು. ಈ ವಿಡಿಯೋವನ್ನು ಕಂಡ ಕೆಲ ನೆಟ್ಟಿಗರು ಶಸ್ತ್ರ ಮರೆತು ಯುದ್ಧಕ್ಕೆ ಹೋದ ಪರಿಸ್ಥಿತಿ ಉಗೊ ಹಂಬರ್ಟ್ ಅವರದ್ದಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.
PublicNext
30/06/2022 03:40 pm