ನವದೆಹಲಿ: ಕನ್ನಡಿಗ ಕೆ.ಎಲ್.ರಾಹುಲ್ ನಾಯಕತ್ವದ ಬಗ್ಗೆ ಟೀಂ ಇಂಡಿಯಾ ಮಾಜಿ ಬ್ಯಾಟರ್ ಸುರೇಶ್ ರೈನಾ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
'ಕೆ.ಎಲ್.ರಾಹುಲ್ ಒಬ್ಬ ಕೂಲ್ ಆ್ಯಂಡ್ ಕಾಮ್ ಕ್ಯಾಪ್ಟನ್. ಯುವ ಆಟಗಾರರಿಗೆ ಇಂತಹ ನಾಯಕನ ಅಗತ್ಯವಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿರೋ ಯುವ ಆಟಗಾರರಿಗೆ ರಾಹುಲ್ ಅವರಂತಹ ನಾಯಕನ ಅಗತ್ಯ ಇದೆ. ಅವರ ನಾಯಕತ್ವದ ಗುಣಗಳು ಯುವ ಆಟಗಾರರಿಗೆ ಸಹಾಯಕವಾಗಲಿವೆ' ಎಂದು ರೈನಾ ಹಾಡಿ ಹೊಗಳಿದ್ದಾರೆ.
PublicNext
08/06/2022 08:46 am