ಮುಂಬೈ: ಐಪಿಎಲ್‌ನಲ್ಲಿ ಘಾತಕ ಎಸೆತಗಳ ಮೂಲಕ ಸದ್ದು ಮಾಡಿರುವ ಎಸ್‌ಆರ್‌ಎಚ್ ತಂಡದ ಸ್ಟಾರ್ ಬೌಲರ್ ಉಮ್ರಾನ್ ಮಲ್ಲಿಕ್ ಕುರಿತಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.
ಉಮ್ರಾನ್ ಮಲ್ಲಿಕ್ ಅವರು ಭಾರತೀಯ ಕ್ರಿಕೆಟ್ ತಂಡದಲ್ಲಿ ದೀರ್ಘಕಾಲ ಉಳಿಯಲಿದ್ದಾರೆ ಎಂದು ಗಂಗೂಲಿ ಭವಿಷ್ಯ ನುಡಿದಿದ್ದಾರೆ. ಕಿರಿಯ ವಯಸ್ಸಿನಲ್ಲೇ ವೇಗದ ಬೌಲಿಂಗ್ ಮೂಲಕವಾಗಿ ಗಮನ ಸೆಳೆದಿರುವ ಮಲ್ಲಿಕ್ ಫಿಟ್‌ನೆಸ್ ಉಳಿಸಿಕೊಂಡು ಆಡಿದರೆ ತಂಡದಲ್ಲಿ ಪ್ರಮುಖ ಬೌಲರ್ ಆಗಿ ಉಳಿಯಲಿದ್ದಾರೆ. ಅವರ ಭವಿಷ್ಯ ಅವರ ಕೈಯಲ್ಲೆ ಇದೆ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.
ಐಪಿಎಲ್‌ನಲ್ಲಿ ಎಸ್‌ಆರ್‌ಎಚ್ ಪರ ಆಡಿದ 14 ಪಂದ್ಯಗಳಲ್ಲಿ 22 ವಿಕೆಟ್ ಪಡೆದು ಆಯ್ಕೆ ಸಮಿತಿ ಗಮನ ಸೆಳೇದಿದ್ದಾರೆ.
PublicNext
26/05/2022 06:16 pm