ಮುಂಬೈ: ಕ್ವಿಂಟನ್ ಡಿ ಕಾಕ್, ದೀಪಕ್ ಹೂಡಾ ಸಮಯೋಚಿತ ಬ್ಯಾಟಿಂಗ್ ಸಹಾಯದಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಪಂಜಾಬ್ ಕಿಂಗ್ಸ್ ತಂಡಕ್ಕೆ 154 ರನ್ಗಳ ಸಾಧಾರಣ ಮೊತ್ತದ ಸವಾಲು ನೀಡಿದೆ.
ಪುಣೆ ಸ್ಟೇಡಿಯಂನಲ್ಲಿ ಐಪಿಎಲ್ 2022ರ ಭಾಗವಾಗಿ ನಡೆಯುತ್ತಿರುವ 42ನೇ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಮಯಾಂಕ್ ಅಗರ್ವಾಲ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡವು 8 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿದೆ. ತಂಡದ ಪರ ಕ್ವಿಂಟನ್ ಡಿ ಕಾಕ್ 46 ರನ್, ದೀಪಕ್ ಹೂಡಾ 34 ರನ್, ದುಷ್ಮಂತ ಚಮೀರ 17 ರನ್ ಹಾಗೂ ಮೊಹ್ಸಿನ್ ಖಾನ್ 13 ರನ್ ಗಳಿಸಿದರು. ಉಳಿದಂತೆ ನಾಯಕ ಕೆ.ಎಲ್.ರಾಹುಲ್, ಕೃನಾಲ್ ಪಾಂಡ್ಯ, ಮಾರ್ಕಸ್ ಸ್ಟೊಯಿನಿಸ್ ಹಾಗೂ ಆಯುಷ್ ಬದೋನಿ ಬ್ಯಾಟಿಂಗ್ ವೈಫಲ್ಯ ಎದುರಿಸಿದರು.
ಇನ್ನು ಪಂಜಾಬ್ ಪರ ಕಗಿಸೋ ರಬಾಡಾ ಪ್ರಮುಖ 4 ವಿಕೆಟ್ ಕಿತ್ತು ಮಿಂಚಿದರೆ, ರಾಹುಲ್ ಚಹಾರ್ 2 ವಿಕೆಟ್ ಹಾಗೂ ಸಂದೀಪ್ ಶರ್ಮಾ 1 ವಿಕೆಟ್ ಉರುಳಿಸಿದರು.
PublicNext
29/04/2022 09:30 pm