ಮೊದಲ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯವು ಏಪ್ರಿಲ್ 18, 2008ರಂದು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವೆ ನಡೆದಿತ್ತು. ಅಂದು ಕೆಕೆಆರ್ ತಂಡವನ್ನು ಸೌರವ್ ಗಂಗೂಲಿ ಮುನ್ನಡೆಸಿದರೆ, ಆರ್‌ಸಿಬಿಗೆ ರಾಹುಲ್ ದ್ರಾವಿಡ್ ನಾಯಕರಾಗಿದ್ದರು.
ಐಪಿಎಲ್ 2022ರಲ್ಲಿ ಆಡುತ್ತಿರುವ ವಿರಾಟ್ ಕೊಹ್ಲಿ ಮತ್ತು ವೃದ್ಧಿಮಾನ್ ಸಹಾ ಮೊದಲ ಐಪಿಎಲ್ ಪಂದ್ಯದಲ್ಲೂ ಕಾಣಿಸಿಕೊಂಡಿದ್ದರು. ಭಾನುವಾರ ಜಿಟಿ ತಂಡವನ್ನು ಸೇರಿಕೊಂಡ ಸಹಾ, ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್ ತಂಡವನ್ನು ಪ್ರತಿನಿಧಿಸಿದ್ದರು. ಇನ್ನು ವಿರಾಟ್ ಕೊಹ್ಲಿ ಆರಂಭದಿಂದಲೂ ಆರ್‌ಸಿಬಿ ಪರ ಆಡುತ್ತಾ ಬಂದಿದ್ದಾರೆ.
PublicNext
18/04/2022 07:46 pm