ಸಿಡ್ನಿ: ಕ್ರಿಕೆಟ್ ಜಗತ್ತು ಕಂಡ ಆಸ್ಟ್ರೇಲಿಯಾದ ಇಬ್ಬರು ದಿಗ್ಗಜ ಕ್ರಿಕೆಟಿಗರು ಕೆಲವೇ ಸಮಯದ ಅಂತರದಲ್ಲಿ ನಮ್ಮನ್ನು ಅಗಲಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ, ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಅವರು ಇಂದು ಬೆಳಗ್ಗೆ ಆಸ್ಟ್ರೇಲಿಯಾದ ಕ್ರಿಕೆಟರ್ ರಾಡ್ ಮಾರ್ಷ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದರು. ಆದರೆ, ಸಂಜೆ ವೇಳೆಗೆ ಅವರೇ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾರೆ.
ಆಸ್ಟ್ರೇಲಿಯಾ ದಿಗ್ಗಜ ಸ್ಪಿನ್ನರ್ ಕೇವಲ 52ರ ಹರೆಯ ಶೇನ್ ವಾರ್ನ್ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಥಾಯ್ಲೆಲೆಂಡ್‌ನ ಕೊಹ್ ಸಮೈು ವಿಲ್ಲಾದಲ್ಲಿ ವಿಶ್ರಾಂತಿಯಲ್ಲಿದ್ದ ವೇಳೆ ವಾರ್ನ್‌ಗೆ ತೀವ್ರ ಅಸ್ವಸ್ಥರಾಗಿದ್ದರು. ತಕ್ಷಣವೇ ವೈದ್ಯಕೀಯ ನೆರವು ನೀಡಿದರೂ ವಾರ್ನ್ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬರಲಿಲ್ಲ. ತೀವ್ರ ಹೃದಯಾಘಾತದಿಂದ ವಾರ್ನ್ ನಿಧನರಾಗಿದ್ದಾರೆ ಎಂದು ವಾರ್ನ್ ಮ್ಯಾನೇಜ್ಮೆಂಟ್ ತಂಡ ಪ್ರಕಟಣೆ ಹೊರಡಿಸಿದೆ. ಇಂದು ಬೆಳಗ್ಗೆ ಆಸೀಸ್ ದಿಗ್ಗಜ ಕ್ರಿಕೆಟಿಗ ರೋಡ್ ಮಾರ್ಶ್ ನಿಧನಕ್ಕೆ ಸಂತಾಪ ಸೂಚಿಸಿದ್ದ ಶೇನ್ ವಾರ್ನ್ ಇದೀಗ ವಾರ್ನ್ ಇನ್ನಿಲ್ಲ ಅನ್ನೋದು ಕ್ರಿಕೆಟ್ ಜಗತ್ತಿಗೆ ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ.
ಆಸ್ಟ್ರೇಲಿಯಾ ದಿಗ್ಗಜ ಕ್ರಿಕೆಟಿಗ ರೊಡ್ ಮಾರ್ಶ್ ಇಂದು (ಮಾ.04) ನಿಧನರಾಗಿದ್ದರು. 74ರ ಹರೆಯದ ರೊಡ್ ಮಾರ್ಶ್ ನಿಧನಕ್ಕೆ ಸಂತಾಪ ಸೂಚಿಸಿ ಶೇನ್ ವಾರ್ನ್ ಕೊನೆಯ ಟ್ವೀಟ್ ಮಾಡಿದ್ದರು. ರೊಡ್ ಮಾರ್ಶ್ ನಿಧನ ಸುದ್ದಿ ತೀವ್ರ ನೋವನ್ನುಂಟು ಮಾಡಿದೆ. ಶ್ರೇಷ್ಠ ಕ್ರಿಕೆಟಿಗನಾಗಿರುವ ರೊಡ್ ಮಾರ್ಶ್ ಯುವ ಕ್ರಿಕೆಟಿಗರಿಗೆ ಸ್ಪೂರ್ತಿಯಾಗಿದ್ದರು. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಕ್ರಿಕೆಟ್‌ಗೆ ರೊಡ್ ಕೊಡುಗೆ ಅಪಾರವಾಗಿದೆ. ರೊಡ್ ಮಾರ್ಶ್ ಕುಟುಂಬಕ್ಕ ದುಃಖ ಎದುರಿಸುವ ಶಕ್ತಿ ಸಿಗಲಿ ಎಂದು ಶೇನ್ ವಾರ್ನ್ ಟ್ವೀಟ್ ಮಾಡಿದ್ದರು.
PublicNext
04/03/2022 10:50 pm