ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆರ್‌ಸಿಬಿ ನೆನೆದು ಭಾವುಕರಾದ ಕೊಹ್ಲಿ

ನವದೆಹಲಿ: ಫೆಬ್ರವರಿ 12 ಮತ್ತು 13ರಂದು ನಡೆಯಲಿರುವ ಐಪಿಎಲ್ ಮೆಗಾ ಹರಾಜಿಗೆ ಮುಂಚಿತವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿನೂತನ ಪ್ರಚಾರ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಈ ವೇಳೆ ಟೀಂ ಇಂಡಿಯಾ, ಆರ್‌ಸಿಬಿ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಭಾವುಕರಾದ ಪ್ರಸಂಗವೊಂದು ನಡೆಯಿತು.

ವಿರಾಟ್ ಕೊಹ್ಲಿ, ತಾವು ಆರ್​ಸಿಬಿ ತಂಡಕ್ಕೆ ಮೊದಲ ಬಾರಿ ಸೆಲೆಕ್ಟ್ ಆದಾಗ ತಮಗೆ ನೀಡಲಾದ ಮೊತ್ತ ಕೇಳಿ ಶಾಕ್ ಆಗಿದ್ದರಂತೆ. ಈ ಕುರಿತು ಖ್ಯಾತ ನಿರೂಪಕ ಡಾನಿಶ್ ಸೇಠ್ ಜೊತೆಗಿನ ಆರ್​ಸಿಬಿಯ ಪಾಡ್​ಕಾಸ್ಟ್​ ಸಂದರ್ಶನ ವೇಳೆ ಕೊಹ್ಲಿ ಮಾತನಾಡಿದ್ದಾರೆ.

'ಐಪಿಎಲ್ ಹರಾಜು ನಡೆಯುತ್ತಿದ್ದಾಗ ನಾನು ಮಲೇಷಿಯಾದಲ್ಲಿ ಅಂಡರ್-19 ವಿಶ್ವಕಪ್ ತಂಡವನ್ನು ಮುನ್ನಡೆಸುತ್ತಿದ್ದೆ. ಹರಾಜಿನಲ್ಲಿ ಆರ್​​ಸಿಬಿ ನನಗೆ ನೀಡಿದ ಮೊತ್ತ ಕೇಳಿ ನನಗೇ ನಂಬಲಾಗಲಿಲ್ಲ. ದೆಹಲಿ ಫ್ರಾಂಚೈಸಿ ನನ್ನನ್ನು ಖರೀದಿಸಲು ಆಸಕ್ತಿ ತೋರಿತ್ತು ಎಂದು ನಾನು ಕೇಳ್ಪಟ್ಟಿದ್ದೆ. ಆದರೆ ಆಗ ನಮ್ಮ ತಂಡದಲ್ಲಿದ್ದ ಎಡಗೈ ವೇಗಿ ಪ್ರದೀಪ್ ಸಾಂಗ್ವಾನ್​ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಈ ಹಿನ್ನೆಲೆ ಡೆಲ್ಲಿ ಫ್ರಾಂಚೈಸಿ ತಮ್ಮ ಬೌಲಿಂಗ್ ಡಿಪಾರ್ಟ್​ಮೆಂಟ್​ನ ಬಲಿಷ್ಠಗೊಳಿಸಲು ಸಾಂಗ್ವಾನ್​ರನ್ನ ಖರೀದಿಸಿತ್ತು' ಎಂದು ಕೊಹ್ಲಿ ಹೇಳಿದ್ದಾರೆ.

ಐಪಿಎಲ್​ ಮೊದಲ ಎಡಿಷನ್​ನಿಂದಲೂ ವಿರಾಟ್ ಕೊಹ್ಲಿ, ಆರ್​ಸಿಬಿ ಬಿಟ್ಟು ಬೇರೆ ತಂಡದ ಪರ ಆಡಿಲ್ಲ. 9 ವರ್ಷಗಳ ಕಾಲ ಆರ್​ಸಿಬಿ ತಂಡವನ್ನ ಮುನ್ನಡೆಸಿರೋ ಕೊಹ್ಲಿ, ಕಳೆದ ವರ್ಷ ಆರ್​ಸಿಬಿ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು.

Edited By : Vijay Kumar
PublicNext

PublicNext

02/02/2022 07:43 am

Cinque Terre

23.91 K

Cinque Terre

0

ಸಂಬಂಧಿತ ಸುದ್ದಿ