ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಮಾತನಾಡಿದ ಒಂದು ವೀಡಿಯೋ ಈಗ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಕರ್ನಾಟಕ ಮತ್ತು ತಮಿಳು ನಾಡು ಹೋಲಿಕೆ ಮಾಡಿಯೇ ಕಪಿಲ್ ಮಾತನಾಡಿದ್ದರು. ಅದಕ್ಕೇನೇ ನೆಟ್ಟಿಗರು ಸಿಕ್ಕಾಪಟ್ಟೆ ಸಿಟ್ಟಾಗಿ ಕಾಮೆಂಟ್ ಮಾಡ್ತಿದ್ದಾರೆ.
ಕರ್ನಾಟಕ ಉತ್ತರ ಭಾರತದಲ್ಲಿ ಇಲ್ಲ. ಇದು ದಕ್ಷಿಣ ಭಾರತದಲ್ಲಿಯೇ ಇದೆ. ತಮಿಳುನಾಡು ಮತ್ತು ಕರ್ನಾಟಕ ಎರಡೂ ಇಲ್ಲಿಯೇ ಇರೋದು.
ನೀವು ಈತ ಎರಡು ರಾಜ್ಯಗಳನ್ನ ಹೋಲಿಕೆ ಮಾಡಿ ಮಾತನಾಡೋದು ಸರಿಯಲ್ಲ. ಇದು ನಿಮಗೆ ಶೋಭೆನೂ ತರೋದಿಲ್ಲ ಅಂತಲೇ ಅನೇಕ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಅಂದ್ಹಾಗೆ ಕಪಿಲ್ ದೇವ,ನನಗೆ ಕರ್ನಾಟಕಕ್ಕಿಂತಲೂ ತಮಿಳುನಾಡು ಇಷ್ಟ. ಇಲ್ಲಿಯ ಫುಡ್ ಮತ್ತು ಈ ನೆಲದ ಮೈದಾನದಲ್ಲಿ ನಾನು ವಿಫಲನಾಗಿಯೇ ಇಲ್ಲ ಅಂತಲೇ ಹೇಳಿದ್ದರು ಕಪಿಲ್.ಹಾಗಾಗಿಯೇ ಹೀಗೆ ಕಾಮೆಂಟ್‌ಗಳ ಸುರಿಮಳೆ ಆಗುತ್ತಿದೆ.
PublicNext
29/12/2021 08:06 am