ಕಾನ್ಪುರ: ಅಕ್ಷರ್ ಪಟೇಲ್, ಆರ್. ಅಶ್ವಿನ್ ಬೌಲಿಂಗ್ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್ 296 ರನ್‌ಗಳಿಗೆ ಸರ್ವಪತನ ಕಂಡಿದ್ದು, ಭಾರತವು 49 ರನ್‌ಗಳಿಂದ ಮುನ್ನಡೆ ಸಾಧಿಸಿದೆ.
ಕಾನ್ಪುರದ ಗ್ರೀನ್ ಪಾರ್ಕ್ನಲ್ಲಿ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಭಾರತವನ್ನು 345 ರನ್ಗೆ ಆಲೌಟ್ ಮಾಡಿ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಕೇನ್ ಪಡೆ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದು, ಎರಡನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 129 ರನ್ ಪೇರಿಸಿತ್ತು. 2ನೇ ದಿನ ಒಂದೂ ವಿಕೆಟ್ ಕೀಳಲು ಭಾರತೀಯ ಬೌಲರ್ಗಳಿಂದ ಸಾಧ್ಯವಾಗಲಿಲ್ಲ. ಇಂದು ಭಾರತದ ಬೌಲರ್‌ಗಳು ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಇದರಿಂದಾಗಿ ಒಂದರ ಹಿಂದೆ ಮತ್ತೊಂದರಂತೆ ವಿಕೆಟ್‌ಗಳು ಉರುಳಿದವು.
ಕಿವೀಸ್ ಪಡೆ 142.3 ಓವರ್‌ಗಳಲ್ಲಿ ಎಲ್ಲಾ 10 ವಿಕೆಟ್ ನಷ್ಟಕ್ಕೆ 296 ರನ್ ಗಳಿಸಲು ಶಕ್ತವಾಯಿತು. ಭಾರತ ಪರ ಅಕ್ಷರ್ ಪಟೇಲ್ 5 ವಿಕೆಟ್, ಆರ್. ಅಶ್ವಿನ್ 3, ರವೀಂದ್ರ ಜಡೇಜಾ ಹಾಗೂ ಉಮೇಶ್ ಯಾದವ್ ತಲಾ ಒಂದು ವಿಕೆಟ್ ಕಿತ್ತು ತಂಡಕ್ಕೆ ಆಸರೆಯಾದರು.
ಸ್ಕೋರ್ ವಿವರ:
ಮೊದಲ ದಿನ: ಭಾರತವು 84 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 258 ಗಳಿಸಿತ್ತು.
ಎರಡನೇ ದಿನ: ಭಾರತವು 111.1 ಓವರ್‌ಗಳಲ್ಲಿ 345 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಮುಕ್ತಾಯಗೊಳಿಸಿತ್ತು
ಕಿವೀಸ್ ಮೊದಲ ಇನ್ನಿಂಗ್ಸ್ 57 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 129 ರನ್ ಗಳಿಸಿದೆ
ಮೂರನೇ ದಿನ: ನ್ಯೂಜಿಲೆಂಡ್ 142.3 ಓವರ್‌ಗಳಲ್ಲಿ 10 ವಿಕೆಟ್ ನಷ್ಟಕ್ಕೆ 296 ರನ್
PublicNext
27/11/2021 04:18 pm