ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತ v/s ನ್ಯೂಜಿಲೆಂಡ್ ಟೆಸ್ಟ್ ಸರಣಿಗೆ ಕ್ಷಣಗಣನೆ

ಬೆಂಗಳೂರು: ಟಿ20 ವಿಶ್ವಕಪ್ ಬಳಿಕ ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧ ದ್ವಿಪಕ್ಷೀಯ ಸರಣಿ ನಾಳೆ(ಬುಧವಾರ) ಶುರುವಾಗಲಿದೆ. ಇನ್ನು ತವರಿನಲ್ಲಿ ನಡೆಯಲಿರುವ ಪಂದ್ಯದಲ್ಲಿ ಮಿಂಚಲು ಭಾರತೀಯ ತಂಡ ತಯಾರಾಗಿದೆ. ಟಿ20 ಸರಣಿ ನವೆಂಬರ್ 17 ಹಾಗೂ ನವೆಂಬರ್ 25 ರಿಂದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ.

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ರೋಹಿತ್ ಶರ್ಮಾ ಟೀಂ ಇಂಡಿಯಾ ನಾಯಕತ್ವ ವಹಿಸಲಿದ್ದಾರೆ. ವಿರಾಟ್ ಕೊಹ್ಲಿ ಟಿ-20 ನಾಯಕತ್ವ ತ್ಯಜಿಸಿದ ಬಳಿಕ ರೋಹಿತ್ ತಂಡದ ಜವಾಬ್ದಾರಿ ವಹಿಸಿಕೊಳ್ಳುತ್ತಿರುವುದು ಇದೇ ಮೊದಲು. ಇದೇ ಸಂದರ್ಭದಲ್ಲಿ ಕನ್ನಡಿಗ ಹಾಗೂ ಮಾಜಿ ಕ್ರಿಕೆಟ್ ಆಟಗಾರ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಟಿ20 ಸರಣಿಯ ದಿನಾಂಕ ಹಾಗೂ ಸ್ಥಳ :

ಮೊದಲ ಟಿ-20 ಪಂದ್ಯ - ನವೆಂಬರ್ 17 - ಜೈಪುರ

ಎರಡನೇ ಟಿ-20 ಪಂದ್ಯ - ನವೆಂಬರ್ 19 - ರಾಂಚಿ

ಮೂರನೇ ಟಿ-20 ಪಂದ್ಯ - ನವೆಂಬರ್ 21 - ಕೊಲ್ಕತ್ತಾ

ಟಿ20 ಹಾಗೂ ಟೆಸ್ಟ್ ಪಂದ್ಯಗಳ ಟೈಮಿಂಗ್

ಮೂರು ಟಿ-20 ಪಂದ್ಯಗಳು ಸಂಜೆ 7 ಗಂಟೆಗೆ ಆರಂಭಗೊಳ್ಳಲಿವೆ ಹಾಗೂ ಟೆಸ್ಟ್ ಪಂದ್ಯಗಳು ಬೆಳಗ್ಗೆ 9.30ಕ್ಕೆ ಪ್ರಾರಂಭಗೊಳ್ಳಲಿವೆ. ನ್ಯೂಜಿಲೆಂಡ್ ಹಾಗೂ ಭಾರತದ ಮಧ್ಯದ ಸರಣಿ ಸ್ಟಾರ್ ಸ್ಪೋರ್ಟ್ ಚಾನೆಲ್ ಪ್ರಸಾರ ಮಾಡಲಿದೆ. ಅಲ್ಲದೆ, ಹಾಟ್ ಸ್ಟಾರ್ ನಲ್ಲಿ ನೇರ ಪ್ರಸಾರವಾಗಲಿದೆ.

ನ. 25 ರಿಂದ ಟೆಸ್ಟ್ ಸರಣಿ ಆರಂಭ

ಉಭಯ ತಂಡಗಳ ನಡುವಿನ ಟೆಸ್ಟ್ ಸರಣಿಯು ನವೆಂಬರ್ 25 ರಿಂದ ಆರಂಭವಾಗಲಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಮೊದಲ ಟೆಸ್ಟ್ ನಲ್ಲಿ ಅಜಿಂಕ್ಯ ರಹಾನೆ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.

Edited By : Nirmala Aralikatti
PublicNext

PublicNext

16/11/2021 09:34 pm

Cinque Terre

69.62 K

Cinque Terre

1

ಸಂಬಂಧಿತ ಸುದ್ದಿ