ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಏಕದಿನ, ಟಿ20 ವಿಶ್ವಕಪ್ ಟೂರ್ನಿ,ಆತಿಥ್ಯವಹಿಸಲಿರುವ ದೇಶಗಳ ಪಟ್ಟಿ ಪ್ರಕಟ

ದುಬೈ: 2024 ರಿಂದ 2031 ನಡೆಯಲಿರುವ ವಿಶ್ವಕಪ್ ಸೇರಿದಂತೆ ಪ್ರಮುಖ ಟೂರ್ನಿಗಳ ಆತಿಥೇಯ ರಾಷ್ಟ್ರಗಳ ಪಟ್ಟಿಯನ್ನು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಪ್ರಕಟಿಸಿದೆ. 2024-2031ರ ಅವಧಿಯಲ್ಲಿ ಒಟ್ಟು 8 ಟೂರ್ನಿಗಳು ನಡೆಯಲಿದ್ದು, ಎರಡು ಏಕದಿನ ವಿಶ್ವಕಪ್, ನಾಲ್ಕು ಟಿ20 ವಿಶ್ವಕಪ್ ಹಾಗೂ ಎರಡು ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ.

ಈ ಟೂರ್ನಿಯನ್ನು ಆಯೋಜಿಸಲು ಆಯೋಜಿಸಲು ಐಸಿಸಿಯ 11 ಪೂರ್ಣ ಸದಸ್ಯ ರಾಷ್ಟ್ರಗಳು ಮತ್ತು ಮೂರು ಸಹಾಯಕ ಸದಸ್ಯ ರಾಷ್ಟ್ರವನ್ನು ಆಯ್ಕೆ ಮಾಡಿದೆ.ಅದರಂತೆ 2024 ರ ಟಿ20 ವಿಶ್ವಕಪ್ ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ಆಯೋಜನೆಯಾಗಲಿದೆ.

2023ರ ಏಕದಿನ ವಿಶ್ವಕಪ್ ಟೂರ್ನಿಯನ್ನು ಭಾರತ ಆತಿಥ್ಯವಹಿಸುತ್ತಿದೆ.

ಪಾಕಿಸ್ತಾನದಲ್ಲಿ 2025ರ ಚಾಂಪಿಯನ್ಸ್ ಟ್ರೋಫಿ ಆಯೋಜಿಸಲು ಐಸಿಸಿ ಗ್ರೀನ್ ಸಿಗ್ನಲ್ ನೀಡಿದೆ. 2016ರಲ್ಲಿ ಚಾಂಪಿಯನ್ಸ್ ಟ್ರೋಫಿ ಚಾಂಪಿಯನ್ ಆಗಿರುವ ಪಾಕಿಸ್ತಾನ ಕ್ರಿಕೆಟ್ ಗೆ ಐಸಿಸಿ ನಿರ್ಧಾರ ಮತ್ತಷ್ಟು ಚೈತನ್ಯ ನೀಡಿದೆ.

2026ರ ಟಿ20 ವಿಶ್ವಕಪ್ ಟೂರ್ನಿಯನ್ನು ಭಾರತ ಹಾಗೂ ಶ್ರೀಲಂಕಾ ಆತಿಥ್ಯವಹಿಸಲಿದೆ. 2016ರಲ್ಲೂ ಭಾರತ ಹಾಗೂ ಶ್ರೀಲಂಕಾ ಟಿ20 ವಿಶ್ವಕಪ್ ಟೂರ್ನಿಯನ್ನು ಜಂಟಿಯಾಗಿ ಆಯೋಜಿಸಿತ್ತು.

2027ರ ಏಕದಿನ ವಿಶ್ವಕಪ್ ಟೂರ್ನಿಯನ್ನು ಮೂರು ದೇಶಗಳು ಆಯೋಜಿಸುತ್ತಿದೆ. ಸೌತ್ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮಿಬಿಯಾ ಆತಿಥ್ಯ ವಹಿಸುತ್ತಿದೆ.

2028ರ ಟಿ20 ವಿಶ್ವಕಪ್ ಟೂರ್ನಿಯನ್ನು ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ ಆಯೋಜಿಸುತ್ತಿದೆ. 2029ರಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿ ಆಯೋಜಿಸಲಿದೆ. ಇಂಗ್ಲೆಂಡ್, 2030ರಲ್ಲಿ ಟಿ20 ವಿಶ್ವಕಪ್ ಆಯೋಜಿಸುತ್ತಿದೆ.

ಇಂಗ್ಲೆಂಡ್, ಐರ್ಲೆಂಡ್ ಹಾಗೂ ಸ್ಕಾಟ್ ಲೆಂಡ್ ದೇಶ 2030ರ ಟಿ20 ವಿಶ್ವಕಪ್ ಟೂರ್ನಿ ಆಯೋಜಿಸುತ್ತಿದೆ. 2031ರಲ್ಲಿ ಭಾರತ ಹಾಗೂ ಬಾಂಗ್ಲಾದೇಶ ಏಕದಿನ ವಿಶ್ವಕಪ್ ಆಯೋಜಿಸಲಿದೆ.

Edited By : Nirmala Aralikatti
PublicNext

PublicNext

16/11/2021 08:37 pm

Cinque Terre

34.18 K

Cinque Terre

0

ಸಂಬಂಧಿತ ಸುದ್ದಿ