ಫುಟ್ ಬಾಲ್ ಆಟದ ಪರಿನೇ ವಿಶೇಷ. ಎದುರಾಳಿಯನ್ನ ತಪ್ಪಿಸಿ ಚೆಂಡನ್ನ ಗೋಲಿಗೆ ತೆಗೆದುಕೊಂಡು ಹೋಗೋದು ಇದೆ ನೋಡಿ. ಅದು ನಿಜಕ್ಕೂ ಚಾಲೆಂಜಿಂಗ್ ಜಾಬೇ ಸರಿ.ಆದರೆ ಇದನ್ನ ಕರಗತ ಮಾಡಿಕೊಂಡ್ರೆ ಮುಗಿತು. ಎದುರಾಳಿ ಹೇಗಿದ್ದರೂ ಸರಿಯೇ. ಫುಟ್ ಬಾಲ್ ಗೋಲ್ ಆಗೋದು ಗ್ಯಾರಂಟಿ. ಇಂತಹ ಚಾಣಾಕ್ಷ ಟ್ರಿಕ್ ಕರಗತ ಮಾಡಿಕೊಂಡ ಫುಟ್ ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿ ಹಿರಿಯ ವ್ಯಕ್ತಿ ಥರವೇ ವೇಷಧರಿಸಿಕೊಂಡು ಫುಟ್ ಬಾಲ್ ಆಟವಾಡಿ ಚಮಕ್ ಕೊಟ್ಟಿದ್ದಾರೆ. 6 ವರ್ಷದ ಹಿಂದಿನ ಈ ಆಟದ ವೀಡಿಯೋ ಈಗ ಮತ್ತೆ ಶೇರ್ ಆಗುತ್ತಿದೆ.
ಹಿರಿಯ ಫುಟ್ ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿ ತಮ್ಮ ಈ ಕಲೆಯನ್ನ ಅಷ್ಟೇ ಅದ್ಭುತವಾಗಿಯೇ ಇಲ್ಲಿ ಪ್ರದರ್ಶಿಸಿದ್ದಾರೆ. ಆಟ-ಪಾಠ ಮತ್ತು ಮನರಂಜನೆ ಎಲ್ಲವೂ ಇಲ್ಲಿದೆ. ಇದನ್ನ ಕಂಡ ಜನ ವಾರೇ ವಾಹ್ ಅಂತಲೇ ಹೇಳುತ್ತಿದ್ದಾರೆ. ಅಷ್ಟು ವಿಶೇಷವಾದ ಈ ವೀಡಿಯೋ 6 ವರ್ಷದ ಹಿಂದಿನದ್ದಾಗಿದೆ. ಆದರೆ ಇದನ್ನ ಕಂಡ ಗುಜರಾತ್ ಕ್ರಿಕೆಟ್ ಅಸೋಷಿಯೇಷನ್ ನ ವೈಸ್ ಪ್ರಸಿಡೆಂಟ್ ಧನರಾಜ್ ನತ್ವಾನಿ ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಈಗ ಶೇರ್ ಮಾಡಿ ಖುಷಿ ಪಟ್ಟಿದ್ದಾರೆ.
PublicNext
10/11/2021 07:47 pm