ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

T20 WC: IND vs NAM: ಟಾಸ್ ಗೆದ್ದ ಭಾರತದಿಂದ ಬೌಲಿಂಗ್ ಆಯ್ಕೆ

ದುಬೈ: ನಮೀಬಿಯಾ ವಿರುದ್ಧದ ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ದುಕೊಂಡಿದ್ದಾರೆ.

ಐಸಿಸಿ ಟಿ20 ವಿಶ್ವಕಪ್​ನ ಸೂಪರ್-12 ಹಂತದ ಕೊನೆಯ ಪಂದ್ಯ ಇದಾಗಿದೆ. ಭಾರತ ಹಾಗೂ ನಮೀಬಿಯಾ ತಂಡಗಳು ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದು, ಸಾಂಕೇತಿಕವಾಗಿ ಇಂದಿನ ಪಂದ್ಯ ನಡೆಯಲಿದೆ. ಇಂದಿನ ಯಾವುದೇ ತಂಡದ ಸೋಲು- ಗೆಲುವು ಟೂರ್ನಿಯ ಮೇಲೆ ಪರಿಣಾಮ ಬೀರುವುದಿಲ್ಲ.

ಟೀಂ ಇಂಡಿಯಾ ತಂಡದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಲಾಗಿದೆ. ಕಳೆದ ಪಂದ್ಯದಲ್ಲಿ ಆಡಿದ್ದ ವರುಣ್ ಚಕ್ರವರ್ತಿ ಅವರನ್ನು ಇಂದಿನ ಪಂದ್ಯದಲ್ಲಿ ಕೈಬಿಟ್ಟು ರಾಹುಲ್ ಚಹರ್‌ಗೆ ಅವಕಾಶ ನೀಡಲಾಗಿದೆ.

Edited By : Vijay Kumar
PublicNext

PublicNext

08/11/2021 07:14 pm

Cinque Terre

27.57 K

Cinque Terre

0

ಸಂಬಂಧಿತ ಸುದ್ದಿ