ಅಬುಧಾಬಿ: ನಜೀಬುಲ್ಲಾ ಝದ್ರಾನ್ ಅರ್ಧಶತಕದ ಸಹಾಯದಿಂದ ಆಫ್ಘಾನಿಸ್ತಾನ ತಂಡವು ನ್ಯೂಜಿಲೆಂಡ್‌ಗೆ 125 ರನ್‌ಗಳ ಸಾಧಾರಣ ಮೊತ್ತದ ಗುರಿ ನೀಡಿದೆ.
ಟಿ20 ವಿಶ್ವಕಪ್ ಟೂರ್ನಿಯ ಭಾಗವಾಗಿ ಇಂದು ಅಬುಧಾಬಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಆಫ್ಘಾನ್ ತಂಡದ ನಾಯಕ ಮೊಹಮ್ಮದ್ ನಬಿ ಬ್ಯಾಟಿಂಗ್ ಆಯ್ದುಕೊಂಡರು. ಆದರೆ ನಾಯಕನ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಲ್ಲಿ ತಂಡವು ವಿಫಲವಾಯಿತು. ಪರಿಣಾಮ 8 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿತು.
ಅಫ್ಘಾನಿಸ್ತಾನದ ಪರ ನಜೀಬುಲ್ಲಾ ಝದ್ರಾನ್ 73 ರನ್ (48 ಎಸೆತ, 6 ಬೌಂಡರಿ, 3 ಸಿಕ್ಸ್) ಸಿಡಿಸಿದರು. ಆದರೆ ನಾಯಕ ಮೊಹಮ್ಮದ್ ನಬಿ ಸೇರಿದಂತೆ ಇನ್ನುಳಿದ ಆಟಗಾರರು 20 ರನ್‌ಗಳ ಗಡಿ ದಾಟಲು ಹೆಣಗಾಡಿದರು. ಇನ್ನು ಕಿವೀಸ್ ಪರ ಟ್ರೆಂಟ್ ಬೋಲ್ಟ್ 4 ವಿಕೆಟ್ ಉರುಳಿಸಿದರೆ, ಟಿಮ್ ಸೌಥಿ 2 ವಿಕೆಟ್, ಆಡಮ್ ಮಿಲ್ನೆ, ಜೇಮ್ಸ್ ನೀಶಮ್ ಹಾಗೂ ಇಶ್ ಸೋಧಿ ತಲಾ ತಲಾ ಒಂದು ವಿಕೆಟ್ ಪಡೆದುಕೊಂಡರು.
PublicNext
07/11/2021 05:11 pm