ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ನಿಮ್ಮ ಸ್ಟಾರ್‌ ಆಟಗಾರನನ್ನ ಗೌರವಿಸಿ': ಶಮಿಗೆ ಪಾಕ್‌ ಕ್ರಿಕೆಟರ್‌ ಬೆಂಬಲ

ದುಬೈ: ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಪಾಕಿಸ್ತಾನ ವಿರುದ್ಧ ಭಾರತ ಸೋಲಿಗೆ ಶರಣಾದ ನಂತರ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದನ್ನು ಅರಿತ ಟೀಂ ಇಂಡಿಯಾ ಮಾಜಿ ಆಟಗಾರರಾದ ವೀರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್, ಸಚಿನ್ ತೆಂಡೂಲ್ಕರ್, ಇರ್ಫಾನ್ ಪಠಾಣ್ ಸೇರಿದಂತೆ ಅನೇಕರು ಶಮಿ ಬೆಂಬಲಕ್ಕೆ ನಿಂತು, ಅವರ ಸಾಧನೆಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.

ಈ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ತಂಡದ ವಿಕೆಟ್ ಕೀಪರ್, ಆರಂಭಿಕ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಟ್ವೀಟ್ ಮಾಡಿ ಮೊಹಮ್ಮದ್ ಶಮಿ ಅವರಿಗೆ ಬೆಂಬಲ ನೀಡಿ ಕ್ರೀಡಾಸ್ಫೂರ್ತಿ ಮೆರೆದಿದ್ದಾರೆ.

"ಒಬ್ಬ ಆಟಗಾರ ತನ್ನ ದೇಶಕ್ಕಾಗಿ, ಅಭಿಮಾನಿಗಳಿಗಾಗಿ ಅನುಭವಿಸಬೇಕಾದ ಒತ್ತಡ, ಹೋರಾಟ ಮತ್ತು ತ್ಯಾಗವನ್ನು ಅಳೆಯಲಾಗದು. ಶಮಿ ವಿಶ್ವದ ಅತ್ಯುತ್ತಮ ಸ್ಟಾರ್ ಬೌಲರ್‌ಗಳಲ್ಲಿ ಒಬ್ಬರು. ದಯವಿಟ್ಟು ನಿಮ್ಮ ಸ್ಟಾರ್‌ ಆಟಗಾರನನ್ನು ಗೌರವಿಸಿ. ಈ ಆಟವು ಜನರನ್ನು ಒಟ್ಟಿಗೆ ಸೇರಿಸಬೇಕೆ ಹೊರತು ಬೇರ್ಪಡಿಸಬಾರದು" ಎಂದು ಮೊಹಮ್ಮದ್ ರಿಜ್ವಾನ್ ಟ್ವೀಟ್ ಮಾಡಿದ್ದಾರೆ. ಜೊತೆಗೆ #Shami #PAKvIND ಎಂದು ಹ್ಯಾಷ್‌ಟ್ಯಾಗ್ ಹಾಕಿದ್ದಾರೆ.

Edited By : Vijay Kumar
PublicNext

PublicNext

26/10/2021 03:39 pm

Cinque Terre

29.15 K

Cinque Terre

2

ಸಂಬಂಧಿತ ಸುದ್ದಿ