ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತದ ವಿರುದ್ಧ ಪಾಕ್ ಗೆಲುವು : ಇಮ್ರಾನ್ ಖಾನ್ ಅಭಿನಂದನೆ

ದುಬೈ : ಬೌಲಿಂಗ್ ಹಾಗೂ ಬ್ಯಾಟಿಂಗ್ ವಿಭಾಗಗಳೆರಡರಲ್ಲೂ ಪ್ರಚಂಡ ಪ್ರದರ್ಶನ ನೀಡಿದ ಪಾಕಿಸ್ಥಾನ ಟಿ20 ವಿಶ್ವಕಪ್ ಲೀಗ್ ಪಂದ್ಯದಲ್ಲಿ ಗೆದ್ದು ಬಿಗಿದೆ. ವಿಶ್ವಕಪ್ ಇತಿಹಾಸದಲ್ಲಿ ಪ್ರಥಮ ಬಾರಿ ಭಾರತ ವಿರುದ್ಧ 10 ವಿಕೆಟ್ ಗಳ ಐತಿಹಾಸಿಕ ಗೆಲುವುಗಳಿದ ಪಾಕ್ ಕ್ರಿಕೆಟಿಗರಿಗೆ ಪ್ರಧಾನಿ ಇಮ್ರಾನ್ ಖಾನ್ ಟ್ವಿಟ್ ಮೂಲಕ ಅಭಿನಂದನೆ ತಿಳಿಸಿದ್ದಾರೆ.

ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಪಾಕಿಸ್ತಾನ್ ತಂಡವು ತನ್ನ ಮಾರಕ ಬೌಲಿಂಗ್ ದಾಳಿಯಿಂದಾಗಿ ಭಾರತಕ್ಕೆ ಆಘಾತ ನೀಡಿದೆ. ಪಾಕ್ ಪರ ಪರಿಣಾಮಕಾರಿ ಬೌಲಿಂಗ್ ದಾಳಿ ನಡೆಸಿದ ಶಾಹಿನ್ ಆಫ್ರಿದಿ ಭಾರತದ ಆರಂಭಿಕ ಆಟಗಾರರಾದ ಕೆ.ಎಲ್ ರಾಹುಲ್ (3) ರೋಹಿತ್ ಶರ್ಮಾ(0) ಅವರ ವಿಕೆಟ್ ಕಬಳಿಸುವ ಮೂಲಕ ಪಂದ್ಯಕ್ಕೆ ರೂಚಕ ತಿರುವು ಕೊಟ್ಟರು.

ಸೂರ್ಯ ಕುಮಾರ್ 11 ರನ್ ಗಳಾಗಿದ್ದಾಗ ಹಸನ್ ಅಲಿ ಅವರಿಗೆ ವಿಕೆಟ್ ಒಪ್ಪಿಸಿದರು. ಭಾರತದ ಪರವಾಗಿ ವಿರಾಟ್ ಕೊಹ್ಲಿ 49 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದಾಗಿ 57 ರನ್ ಗಳಿಸಿದರೆ, ರಿಶಬ್ ಪಂತ್ 30 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದಾಗಿ 39 ರನ್ ಗಳಿಸಿದರು. ಆ ಮೂಲಕ ಭಾರತ ತಂಡವು 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿತು.

ಪಾಕಿಸ್ತಾನದ ಪರವಾಗಿ ಶಾಹಿನ್ ಆಫ್ರಿದಿ ಮೂರು ಹಾಗೂ ಹಸನ್ ಅಲಿ ಎರಡು ವಿಕೆಟ್ ಗಳನ್ನು ಕಬಳಿಸುವ ಮೂಲಕ ಭಾರತದ ರನ್ ವೇಗಕ್ಕೆ ಬ್ರೇಕ್ ಹಾಕಿದರು.ಭಾರತ ತಂಡವು ನೀಡಿದ 152 ರನ್ ಗಳ ಗುರಿಯನ್ನು ಬೆನ್ನತ್ತಿದ ಪಾಕ್ ತಂಡವು ಮೊಹಮ್ಮದ್ ರಿಜ್ವಾನ್ (79) ಹಾಗೂ ಬಾಬರ್ ಅಜಮ್ (68) ರನ್ ಗಳ ಮೂಲಕ 17.5 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗೆಲುವಿನ ಗುರಿಯನ್ನು ತಲುಪಿತು.

ಪಾಕ್ ಗೆಲುವಿನ ನಗೆ ಬಿರುತ್ತಿದ್ದಂತೆ ಟ್ವಿಟ್ ಮಾಡಿದ ಇಮ್ರಾನ್ ಖಾನ್ ಶಾಹಿನ್ ಆಫ್ರಿದಿ, ಮೊಹಮ್ಮದ್ ರಿಜ್ವಾನ್, ಬಾಬರ್ ಅಜಮ್ ಅದ್ಭುತ ಪ್ರದರ್ಶನಕ್ಕೆ ರಾಷ್ಟ್ರ ನಿಮ್ಮ ಬಗ್ಗೆ ಹೆಮ್ಮೆ ಪಡುತ್ತಿದೆ. ಹಾಗೆ ಇಡೀ ಪಾಕ್ ಕ್ರಿಕೆಟ್ ತಂಡಕ್ಕೆ ಅಭಿನಂದನೆ ಎಂದಿದ್ದಾರೆ.

Edited By : Nirmala Aralikatti
PublicNext

PublicNext

25/10/2021 08:41 am

Cinque Terre

56.57 K

Cinque Terre

14

ಸಂಬಂಧಿತ ಸುದ್ದಿ