ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

T20 WC: ಚರಿತ್ ಅಸಲಂಕ ಅಬ್ಬರ- ಬಾಂಗ್ಲಾ ವಿರುದ್ಧ ಲಂಕಾಗೆ ಭರ್ಜರಿ ಗೆಲವು

ಶಾರ್ಜಾ: ಚರಿತ್ ಅಸಲಂಕ ಅಬ್ಬರದ ಬ್ಯಾಟಿಂಗ್ ಸಹಾಯದಿಂದ ಶ್ರೀಲಂಕಾ ತಂಡವು ಬಾಂಗ್ಲಾದೇಶ ವಿರುದ್ಧ 5 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.

ಶರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಿ20 ವಿಶ್ವಕಪ್ ಟೂರ್ನಿಯ ಭಾಗವಾಗಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಬೌಲಿಂಗ್ ಆಯ್ದುಕೊಂಡಿತ್ತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ ತಂಡವು ಮೊಹಮ್ಮದ್ ನೈಮ್ ( 62 ರನ್) ಹಾಗೂ ಮುಶ್ಫಿಕರ್ ರಹೀಮ್ (57 ರನ್) ಅರ್ಧಶತಕದ ಸಹಾಯದಿಂದ 4 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತ್ತು.

172 ರನ್‌ಗಳ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡವು 7 ಎಸೆತಗಳು ಬಾಕಿ ಇರುವಂತೆ 5 ವಿಕೆಟ್ ನಷ್ಟಕ್ಕೆ 172 ರನ್ ಚಚ್ಚಿ ಗೆಲುವು ಸಾಧಿಸಿದೆ. ತಂಡದ ಗೆಲುವಿಗೆ ಚರಿತ್ ಅಸಲಂಕ ಅಪಾರ ಕೊಡುಗೆ ನೀಡಿದರು. ಚರಿತ್ 49 ಎಸೆತಗಳಲ್ಲಿ ಅಜೇಯ 80 ರನ್ ಸಿಡಿಸಿ ಪಂದ್ಯ ಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು.

Edited By : Nagaraj Tulugeri
PublicNext

PublicNext

24/10/2021 07:44 pm

Cinque Terre

57.85 K

Cinque Terre

0

ಸಂಬಂಧಿತ ಸುದ್ದಿ