ಎಂ.ಎಸ್. ಧೋನಿಯನ್ನು ಮೆಚ್ಚದವರಿಲ್ಲ…ಹಾಗಾಗಿಯೇ ಅವರಿಗೆ ಕೂಲ್ ಕ್ಯಾಪ್ಟನ್ ಎಂದು ಕರೆಯಲಾಗುತ್ತದೆ. ಎಲ್ಲವನ್ನು ಸಮಾಧಾನದಿಂದ ನಿಭಾಯಿಸುವ ಧೋನಿಗೆ ಧೋನಿಯೇ ಸಾಕ್ಷಿ..
ಸದ್ಯ ಐಪಿಎಲ್ 14 ನೇ ಆವೃತ್ತಿಯಲ್ಲಿ ಪುಟ್ಟ ಅಭಿಮಾನಿಗಳಿಗೆ ಎಂ.ಎಸ್ ಧೋನಿ ಗಿಫ್ಟ್ ಕೊಟ್ಟಿದ್ದಾರೆ. ಹೌದು ಧೋನಿ ತಮ್ಮ ಅಭಿಮಾನಿಗಳನ್ನು ಎಷ್ಟು ಪ್ರೀತಿಸುತ್ತಾರೆ ಎನ್ನುವುದಕ್ಕೆ ನಿನ್ನೆ ಬರೀ ಕ್ರಿಕೆಟ್ ಮೈದಾನದಲ್ಲಿ ನಡೆದ ಒಂದು ಘಟನೆಯೇ ಸಾಕ್ಷಿ.. ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 4 ವಿಕೆಟ್ ಗಳಿಂದ ರೋಚಕ ಜಯ ಗಳಿಸಿ ಫೈನಲ್ ತಲುಪಿದೆ.
ಧೋನಿ ಗೆಲುವಿನ ಆ ರನ್ ಹೊಡೆದಾಗ ಸಿಎಸ್ ಕೆ ತಂಡದ ಡುಗೌಟ್ನಲ್ಲಿದ್ದ ಆಟಗಾರರು ಮತ್ತು ಪ್ರೇಕ್ಷಕರ ಗ್ಯಾಲರಿಯಲ್ಲಿದ್ದಂತಹ ಅಭಿಮಾನಿಗಳು ಖುಷಿಯಿಂದ ಕುಣಿದಾಡಲು ಪ್ರಾರಂಭಿಸಿದರು. ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತ ಇಬ್ಬರು ಚಿಕ್ಕ ಮಕ್ಕಳು ಧೋನಿ ಪಂದ್ಯವನ್ನು ಗೆಲ್ಲಿಸಿ ಕೊಟ್ಟಿದ್ದಕ್ಕಾಗಿ ಸಂತೋಷದಿಂದ ತಮ್ಮ ತಾಯಿಗೆ ಅಪ್ಪಿಕೊಂಡು ಅಳಲು ಪ್ರಾರಂಭಿಸಿದರು.
ಆ ಸಂತೋಷದಿಂದ ಇಟ್ಟಂತಹ ಕಣ್ಣೀರನ್ನು ವಿಡಿಯೋದಲ್ಲಿ ನೋಡಿದ ಧೋನಿ ತಕ್ಷಣವೇ ಮಕ್ಕಳೆಡೆಗೆ ಸಾಗಿ ಪಂದ್ಯದ ಚೆಂಡಿನ ಮೇಲೆ ತಮ್ಮ ಆಟೋಗ್ರಾಫ್ ಮಾಡಿ ಚೆಂಡನ್ನು ತಮ್ಮ ಪುಟ್ಟ ಅಭಿಮಾನಿಗಳಿಗೆ ಉಡುಗೊರೆಯಾಗಿ ನೀಡಿದ್ದಾರೆ. ತಮ್ಮ ನೆಚ್ಚಿನ ಆಟಗಾರ ಧೋನಿಯಿಂದ ಚೆಂಡು ಪಡೆದಂತಹ ಮಕ್ಕಳ ಸಂತೋಷಕ್ಕೆ ಪಾರವೇ ಇರಲಿಲ್ಲ..
PublicNext
11/10/2021 04:40 pm