ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 2021 | CSK vs DC: 27 ಎಸೆತಗಳಲ್ಲಿ ಒಂದೇ ಒಂದು ಬೌಂಡರಿ ಬಾರಿಸದ ಧೋನಿ- ಡೆಲ್ಲಿಗೆ 137 ರನ್‌ಗಳ ಗುರಿ

ದುಬೈ: ಅಂಬಾಟಿ ರಾಯ್ಡು ಸಮಯೋಚಿತ ಅರ್ಧಶತಕ ಹಾಗೂ ನಾಯಕ ಎಂ.ಎಸ್‌ ಧೋನಿ ತಾಳ್ಮೆಯ ಬ್ಯಾಟಿಂಗ್ ಸಹಾಯದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 137 ರನ್‌ಗಳ ಗುರಿ ನೀಡಿದೆ.

ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ 14ನೇ ಆವೃತ್ತಿಯ 50ನೇ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ನಾಯಕ ರಿಷಭ್ ಪಂತ್ ಬೌಲಿಂಗ್ ಆಯ್ದುಕೊಂಡರು. ಇದರೊಂದಿಗೆ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡವು 5 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿತು. ತಂಡದ ಪರ ಅಂಬಾಟಿ ರಾಯ್ಡು 55 ರನ್, ನಾಯಕ ಎಂ.ಎಸ್. ಧೋನಿ‌ 18 ರನ್, ರಾಬಿನ್ ಉತ್ತಪ್ಪ 19 ರನ್‌ ಗಳಿಸಿದರು.

ನಾಯಕ ಎಂ.ಎಸ್.ಧೋನಿ ಅವರು ಎದುರಿಸಿದ 27 ಎಸೆತಗಳಲ್ಲಿ ಒಂದೇ ಒಂದು ಬೌಂಡರಿ ಅಥವಾ ಸಿಕ್ಸ್ ಸಿಡಿಸದೆ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದರು.

Edited By : Vijay Kumar
PublicNext

PublicNext

04/10/2021 09:20 pm

Cinque Terre

104.46 K

Cinque Terre

2

ಸಂಬಂಧಿತ ಸುದ್ದಿ