ನವದೆಹಲಿ: ಟೀಂ ಇಂಡಿಯಾದ ಮಾಜಿ ಬ್ಯಾಟ್ಸ್‌ಮನ್, ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ 2007ರ ಸೆಪ್ಟೆಂಬರ್ 19ರಂದು ಸಿಕ್ಸ್ ಸಿಕ್ಸ್ ವಿಶ್ವದಾಖಲೆ ನಿರ್ಮಿಸಿದ್ದರು.
ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಯುವರಾಜ್ ಸಿಂಗ್ ಓವರ್‌ವೊಂದರ ಎಲ್ಲ ಆರು ಎಸೆತಗಳನ್ನು ಸಿಕ್ಸರ್‌ಗಟ್ಟುವ ಮೂಲಕ ದಾಖಲೆ ಬರೆದಿದ್ದರು. ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಅವರ ಓವರ್ ಒಂದರಲ್ಲಿ ಯುವಿ ಪ್ರತಿ ಎಸೆತಕ್ಕೂ ಸಿಕ್ಸ್ ಬಾರಿಸಿದ್ದರು. ಈ ಪಂದ್ಯದಲ್ಲಿ ಯುವಿ ಕೇವಲ 16 ಎಸತಗಳಿಗೆ 58 ರನ್ ಕಲೆ ಹಾಕಿದ್ದರು.
ಅಂದು ಯುವಿ ಸ್ಫೋಟಕ ಬ್ಯಾಟಿಂಗ್ ತೋರಿದ್ದು ಯಾಕೆ ಎನ್ನುವುದು ಕ್ರಿಕೆಟ್ ಅಭಿಮಾನಿಗಳಿಗೆ ಗೊತ್ತಿದೆ. ಈ ಬಗ್ಗೆ ಸ್ವತಃ ಯುವರಾಜ್ ಸಿಂಗ್ ವಿಡಿಯೋ ಮಾಡಿ ಅಂದಿನ ಪ್ರಸಂಗವನ್ನು ವಿವರಿಸಿದ್ದಾರೆ. ಈ ವಿಡಿಯೋದಲ್ಲಿ ಯುವಿ ಮೋಟಾರ್ ಸೈಕಲ್ ಹೆಲ್ಮೆಟ್ ಧರಿಸಿ ಬ್ಯಾಟಿಂಗ್ ಮಾಡುವುದನ್ನು ಕಾಣಬಹುದಾಗಿದೆ.
PublicNext
22/09/2021 01:59 pm