ಮುಂಬೈ: ಬಿಸಿಸಿಐ 2022ರ ಐಪಿಎಲ್ ಕೂಟಕ್ಕೆ ತಯಾರಿ ನಡೆಸುತ್ತಿದೆ. ಮುಂದಿನ ಆವೃತ್ತಿಯ ಐಪಿಎಲ್ ನಲ್ಲಿ ಎರಡು ಹೆಚ್ಚುವರಿ ತಂಡಗಳು ಕಣಕ್ಕಿಳಿಯಲಿದೆ ಎಂದು ಈಗಾಗಲೇ ಬಿಸಿಸಿಐ ತಿಳಿಸಿದೆ. ಈ ಎರಡು ತಂಡಗಳ ಬಗ್ಗೆ ಅಂತಿಮಗೊಳಿಸಲು ಬಿಸಿಸಿಐ ಸಜ್ಜಾಗಿದೆ.
ಮೂಲಗಳ ಪ್ರಕಾರ ಅ.17ರಂದು ಈ ಎರಡು ತಂಡಗಳಿಗಾಗಿ ಹರಾಜು ನಡೆಯಲಿದೆ. ಅಂದು ಎರಡು ಹೆಚ್ಚುವರಿ ತಂಡಗಳು ಯಾವುದು? ಯಾವ ನಗರವನ್ನು ಪ್ರತಿನಿಧಿಸುತ್ತದೆ ಮತ್ತು ಯಾರು ಮಾಲಕರು ಎನ್ನುವ ಮಾಹಿತಿ ಬಹುತೇಕ ಅಂದೇ ತಿಳಿಯಲಿದೆ.
ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ, ಪ್ರತಿ ಬಿಡ್ಡರ್ 2500 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯವನ್ನು ಹೊಂದಿರಬೇಕು ಮತ್ತು ಕಂಪನಿಯು 3000 ಕೋಟಿ ರೂಪಾಯಿಗಳ ವಹಿವಾಟು ಹೊಂದಿರಬೇಕು ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಪಾರ್ಟ್ನರ್ ಶಿಪ್ ನಲ್ಲಿ ಬಿಡ್ ಮಾಡುವುದಾದರೆ, ಬಿಸಿಸಿಐ ಕೇವಲ ಮೂವರು ಪಾಲುದಾರರಿಗೆ ಮಾತ್ರ ಅವಕಾಶ ನೀಡಿದೆ. ಅವರಲ್ಲಿ ಒಬ್ಬರು ಮೇಲಿನ ಮಾನದಂಡವಾದ ರೂ 2500 ಕೋಟಿ ನಿವ್ವಳ ಮೌಲ್ಯ ಮತ್ತು ರೂ 3000 ಕೋಟಿ ವಹಿವಾಟು ಪೂರೈಸಬೇಕು ಎಂದು ಸೂಚಿಸಿದೆ. ತಂಡದ ಬಿಡ್ಡಿಂಗ್ ಗೆ ಮೂಲ ಬೆಲೆಯಾಗಿ 2000 ಕೋಟಿ ರೂಪಾಯಿಗಳು ಎಂದು ಕ್ರಿಕ್ ಬಜ್ ವರದಿ ಮಾಡಿದೆ.
ಸದ್ಯ ಐಪಿಎಲ್ ನಲ್ಲಿ ಎಂಟು ತಂಡಗಳು ಭಾಗವಹಿಸುತ್ತಿದೆ. ಒಂದು ಕೂಟದಲ್ಲಿ ಒಂದು ತಂಡ ಕನಿಷ್ಠ 14 ಪಂದ್ಯಗಳನ್ನು ಆಡುತ್ತದೆ. ಆದರೆ 10 ತಂಡಗಳಾದಲ್ಲಿ ಪ್ರತಿ ತಂಡ 9 ತವರು ಪಂದ್ಯ ಮತ್ತು 9 ಹೊರಗಿನ ಪಂದ್ಯ ಸೇರಿ ಕನಿಷ್ಠ 18 ಪಂದ್ಯಗಳನ್ನು ಆಡಬೇಕಾಗುತ್ತದೆ.
PublicNext
14/09/2021 05:42 pm