ನವದೆಹಲಿ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಐದನೇ ಪಂದ್ಯ ರದ್ದತಿಯ ವಿಚಾರವಾಗಿ ಇಂಗ್ಲೆಂಡ್ ಮಾಧ್ಯಮಗಳು ಟೀಂ ಇಂಡಿಯಾ ವಿರುದ್ಧ ಅಸಮಾಧಾನ ಹೊರ ಹಾಕಿವೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಟೀಂ ಇಂಡಿಯಾ ಮಾಜಿ ನಾಯಕ ಸುನಿಲ್ ಗವಾಸ್ಕರ್, "ಆಂಗ್ಲ ಮಾಧ್ಯಮಗಳು ಎಂದಿಗೂ ಭಾರತದ ತಂಡದ ಬಗ್ಗೆ ಒಳ್ಳೆಯದನ್ನು ಹೇಳುವುದಿಲ್ಲ ಅಥವಾ ಬರೆಯುವುದಿಲ್ಲ. ಹೊರತಾಗಿ ಯಾವಾಗಲೂ ಟೀಂ ಇಂಡಿಯಾವನ್ನು ಗುರಿಯಾಗಿಸುತ್ತಾರೆ. ದಯವಿಟ್ಟು ಸತ್ಯ ಏನೆಂದು ತಿಳಿದುಕೊಂಡು ನಂತರ ಬೆರಳು ಮಾಡಿ" ಎಂದು ಕಿಡಿಕಾರಿದ್ದಾರೆ.
PublicNext
13/09/2021 06:21 pm